ಮೈಸೂರು ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಮೈಸೂರು:ಮೈಸೂರಿನ ರಸ್ತೆ ಗುಂಡಿಗಳಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಮೈಸೂರು ನಗರಪಾಲಿಕೆ  ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಮೈಸೂರು ಪ್ರಜ್ಞಾವಂತ ವೇದಿಕೆ ಸದಸ್ಯರು ಪ್ರತಿಭಟನೆ ಮಾಡಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೃಷ್ಣಮೂರ್ತಿಪುರಂ ರಾಮಮಂದಿರ ಎದುರು ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನ ಕೂಗಿ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.

ಮೈಸೂರಿನ ಕಾಂತರಾಜ ರಸ್ತೆ ರಾಮಮಂದಿರ ಮುಂಭಾಗ ಭಾನುವಾರ ರಾತ್ರಿ ರಸ್ತೆ  ಗುಂಡಿಯಿಂದ ಚಾಲನೆ ತಪ್ಪಿ ದರ್ಶನ್ ಕುಮಾರ್ (30) ಮೃತಪಟ್ಟಿದ್ದರು.

ಅವರ ನಿಧನಕ್ಕೆ ರಸ್ತೆ ಗುಂಡಿ  ಕಾರಣ, ಡಾಂಬಾರೀಕರಣ ಮಾಡದೆ  ಮೈಸೂರು ನಗರಪಾಲಿಕೆ  ನಿರ್ಲಕ್ಷ್ಯ ಮಾಡಿದೆ,ಪಾಲಿಕೆಯ  ದುರಾಡಳಿತ ಕಾರಣ ಎಂದು ಮೈಸೂರು ಪ್ರಜ್ಞಾವಂತ  ವೇದಿಕೆ ಹಾಗೂ ಕೃಷ್ಣಮೂರ್ತಿಪುರಂ ಲಕ್ಷ್ಮಿಪುರಂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ  ಮಾತನಾಡಿ ಕಳೆದ ಎರಡ್ಮೂರು ವರ್ಷಗಳಿಂದ ಮೈಸೂರು ನಗರದ ಬಹುತೇಖ ಮುಖ್ಯ ರಸ್ತೆಗಳು  ಡಾಂಬರೀಕರಣ  ಕಂಡಿಲ್ಲ ಎಂದು ದೂರಿದರು.

ಗುಂಡಿಗಳಿಂದಾಗಿ ರಸ್ತೆ ಅಫಘಾತದಲ್ಲಿ ಹಿರಿಯ ನಾಗರೀಕರು, ಮಹಿಳೆಯರು  ಬಿದ್ದು  ನೋವನುಭವಿಸುವವರ ಸಂಖ್ಯೆ ದಿನೆದಿನೇ ಹೆಚ್ಚುತ್ತಿದೆ ಎಂದು ಹೇಳಿದರು.

ಹಳ್ಳಕೊಳ್ಳಗಳ ರಸ್ತೆ, ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆಗಳಲ್ಲಿ ಸುಗಮ ಸಂಚಾರ, ರಸ್ತೆ ಸುರಕ್ಷತೆಯ ಬಗ್ಗೆ ಗಮನ ನೀಡದೆ ನಗರಪಾಲಿಕೆ ನಿರ್ಲಕ್ಷ್ಯ ತಾಳಿದೆ ಎಂದು ಕಿಡಿಕಾರಿದರು.

ಕೇವಲ ಸಿಸಿ ಕ್ಯಾಮರದಲ್ಲಿ ಹೆಲ್ಮೆಟ್ ದಂಡ ನೋಪಾರ್ಕಿಂಗ್ ದಂಡ ವಿಧಿಸುವ ಅಧಿಕಾರಿಗಳಿಗೆ ರಸ್ತೆ ಗುಂಡಿ, ಹಳ್ಳಕೊಳ್ಳಗಳು  ಅದರಿಂದಾದ ಅಪಘಾತಗಳ ಬಗ್ಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಮಳೆಯಿಂದಾಗಿ ಕೆಲವೆಡೆ ಮರಳುಕಸ ಕಲ್ಲುಗಳು ಹಾಗೇ ವೃತ್ತಗಳಲ್ಲಿ ರಸ್ತೆಯಬದಿಗಳಲ್ಲಿ ಬಿದ್ದಿದೆ.ಇದು ಅಪಘಾತಗಳಿಗೆ ಎಡೆ ಮಾಡಿದೆ.  ನಾಗರೀಕರು ಮತ್ತು ತೆರಿಗೆದಾರರ ಬೈಗುಳ ನಗರಪಾಲಿಕೆಗೆ ಕೇಳಿಸುತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಂಡಿ ಮುಚ್ಚಲು ಈಗಾಗಲೇ ನಿಗಧಿಯಾಗಿರುವ ಹಣವನ್ನ ಬಿಡುಗಡೆ ಮಾಡಿ ಡಾಂಬರೀಕರಣಕ್ಕೆ ಆಯುಕ್ತರು ಅವಕಾಶ ಮಾಡಿಕೊಡಲಿ.

ಅಧಿಕಾರಿಗಳು ಎಸಿ ಕಾರಿನಿಂದ ರಸ್ತೆಗಿಳಿದು ಜನರಜೀವ ಉಳಿಸಲಿ ಅಪಾಯದ ಗುಂಡಿಗಳ ವೀಕ್ಷಣೆಗೆ ಮುಂದಾಗಲಿ ಅಭಿವೃದ್ಧಿ ಅಧಿಕಾರಿಗಳು ವಲಯ ಇಂಜಿನಿಯರ್ ಗಳು, ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವಾರ್ಡ್ ವ್ಯಾಪ್ತಿಯಲ್ಲಿ ಅಪಾಯದ ಗುಂಡಿಗಳನ್ನ ಗುರುತಿಸಿ ಮುಚ್ಚಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ರಸ್ತೆ ಅಪಘಾತದಿಂದಾಗಿ ಮೃತರಾದ ದರ್ಶನ್ ಕುಮಾರ್ ಕುಟುಂಬಕ್ಕೆ ಮರಣ ಪರಿಹಾರ ನಿಧಿ ಕೊಡಲು ಮೈಸೂರು ನಗರ ಪಾಲಿಕೆ ಮುಂದಾಗಬೇಕು ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್,  ಕೃಷ್ಣರಾಜೇಂದ್ರ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜು ಬಸಪ್ಪ, ಕಾಂಗ್ರೆಸ್ ಮುಖಂಡರಾದ  ಜಿ. ರಾಘವೇಂದ್ರ, ವಿನಯ್ ಕಣಗಾಲ್, ಎಸ್.ಎನ್ ರಾಜೇಶ್, ಜೈ ಭೀಮ್ ಜನಸ್ಪಂದನ ವೇದಿಕೆ  ಚೇತನ್ ಕಾಂತರಾಜು, ಶ್ರೀಕಾಂತ್ ಕಶ್ಯಪ್, ಯೋಗಿಶ್, ಹರೀಶ್ ನಾಯ್ಡು, ಕೆಫೆ ಪ್ರಸಾದ್, ಕಾಂತರಾಜು,  ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು