ಮೈಸೂರು:ಮೈಸೂರು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 4,105 ಕೊರೊನಾ ಪ್ರಕರಣ ಪತ್ತೆಯಾಗಿದೆ.
1,703 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 2,07,135 ಮಂದಿಗೆ ಕೊರೊನಾ ತಗುಲಿದ್ದು, 1,85,834 ಮಂದಿ ಗುಣಮುಖರಾಗಿದ್ದಾರೆ. 18,846 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಸೋಮವಾರ 3 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 2,455 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ 1 ರಿಂದ5 ವರ್ಷದೊಳಗಿನ ಮಕ್ಕಳು 3, 6-10 ವರ್ಷದೊಳಗಿನ 22 ಮಕ್ಕಳು, 11-17 ವರ್ಷದೊಳಗಿನ 145 ಮಕ್ಕಳು ಮಂದಿ ಸೇರಿದಂತೆ ಒಟ್ಟು 170 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಹೆಚ್.ಡಿ.ಕೋಟೆ 55, ಹುಣಸೂರು 287, ಕೆ.ಆರ್.ನಗರ 201, ಮೈಸೂರು ನಗರ 2,663, ಮೈಸೂರು ತಾಲೂಕು 154, ನಂಜನಗೂಡು 283, ಪಿರಿಯಾಪಟ್ಟಣ 236,ಸಾಲಿಗ್ರಾಮ 12, ತಿ.ನರಸೀಪುರ 164 ಪ್ರಕರಣ ಸೇರಿದಂತೆ ಒಟ್ಟು 4105 ಪ್ರಕರಣ ಪತ್ತೆಯಾಗಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 507 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಸಲಹೆ ಮೇರೆಗೆ 18,339 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3761 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

