ಹೆಣ್ಣು ಮಗು ಸಮಾಜದ ತಾತ್ಸಾರ ಸಲ್ಲ -ನವೀನ್ ಕುಮಾರ್

ಮೈಸೂರು: ಹೆಣ್ಣು ಮಗು ಬಗ್ಗೆ ಸಮಾಜದ ತಾತ್ಸಾರ ಸಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ತಿಳಿಸಿದರು.

ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ ಹೆಣ್ಣು ಮಕ್ಕಳಿಗೆ ಪುಸ್ತಕ ಹಾಗೂ ಸಿಹಿ ವಿತರಿಸಿ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಮಹತ್ವ ಹಾಗೂ ಜಾಗೃತಿ ಬಗ್ಗೆ ಎನ್ ಎಂ ನವೀನ್ ಕುಮಾರ್ ತಿಳಿಸಿದರು.

ಹೆಣ್ಣು ಹುಟ್ಟಿದರೆ ಹುಣ್ಣು ಅಂಟಿದಂತೆ ಎಂಬ ತಪ್ಪು ಕಲ್ಪನೆಯ ಕಾಲವೊಂದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಹೆಣ್ಣು ಕುಟುಂಬದ ಕಣ್ಣು ಎಂಬ ಪರಿಕಲ್ಪನೆ ಆರಂಭವಾಗಿದೆ ಎಂದರು.

ಹೆಣ್ಣು ಮಗು ಜನಿಸಿದೆ ಎಂಬ ಕೀಳರಿಮೆಗೆ ಕುಟುಂಬ ಸದಸ್ಯರು ಒಳಗಾಗಬಾರದು. ಹೆಣ್ಣು ಮಕ್ಕಳಿಗೆ ಸಿಗುತ್ತಿರುವ ಸ್ಥಾನಮಾನ, ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಮಹಿಳೆಯರ ಹಿತರಕ್ಷಣೆ ಹಾಗೂ ಏಳಿಗೆಗಾಗಿ ಇರುವ ಕಾನೂನು ಸೌಲತ್ತುಗಳ ಕುರಿತು ಜಾಗೃತಿ ಅಗತ್ಯ ಎಂದವರು ಹೇಳಿದರು.

ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಅವರ ಶಿಕ್ಷಣ, ಆರೋಗ್ಯ, ಹಕ್ಕುಗಳು ಮತ್ತು ಪೆÇೀಷಣೆಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಪಯತ್ನ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಗೋಲ್ಡ್ ಸುರೇಶ್, ವಿನಯ್ ಕಣಗಾಲ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣವತಿ ಉಪಸ್ಥಿತರಿದ್ದರು.