ನವದೆಹಲಿ:ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕೌಶಲ್ಯದಿಂದ ತಯಾರಿಸಿದ ಮಡಿಕೆಗಳು, ಸೂಕ್ಷ್ಮವಾಗಿ ಕೆತ್ತಲಾದ ಗಂಧದ ಮಿನಿಯೇಚರ್‍ಗಳು, ಕೈಮಗ್ಗದ ಸೀರೆಗಳು ಮುಂತಾದ ಕರ್ನಾಟಕದ ಶ್ರೀಮಂತ ಕರಕುಶಲ ಕಲೆಗಳು ಎಲ್ಲರನ್ನು ಆಕರ್ಷಿಸಿದವು.
ಮೈಸೂರು ರೋಸ್‍ವುಡ್‍ನಲ್ಲಿ ಕೆತ್ತಿದ ಮತ್ತು ದಂತದ ಒಳಕೆತ್ತನೆಗಳಿಂದ ಕೂಡಿದ ಬೃಹತ್ ಏಷ್ಯಾಟಿಕ್ ಆನೆ, ಕಣ್ಸೆಳೆಯುವ ಬಿರ್ರಿವೇರ್, ಕಂಚಿನ ಪ್ರತಿಮೆಗಳು ಮತ್ತು ಚನ್ನಪಟ್ಟಣದ ಮರದ ಆಟಿಕೆಗಳು ಸ್ತಬ್ಧಚಿತ್ರದ ಪ್ರಮುಖ ವದವು.
ಭಾರತದಲ್ಲಿ ಕರ್ನಾಟಕ ಕರಕುಶಲ ಕಲೆಗಳ ತವರೂರು ಎಂಬುದು ಈ ಸ್ತಬ್ಧಚಿತ್ರದ ಧ್ಯೇಯವಾಗಿತ್ತು.
ಸ್ತಬ್ಧಚಿತ್ರದಲ್ಲಿ ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಗಳ ತಾಯಿ ಎಂದೇ ಜನಪ್ರಿಯರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಚಿತ್ರವೂ ಇತ್ತು.
ಕಮಲಾ ಅವರು ಒಂದು ಗಂಧದ ಪೆಟ್ಟಿಗೆ, ನವಿಲಿನಾಕೃತಿಯ ಹಣೆಗಳು, ಸಂಡೂರಿನ ಬಾಳೆನಾರಿನ ಚೀಲಗಳನ್ನೊಳಗೊಂಡ ಬಾಗಿನ ನೀಡುತ್ತಿರುವಂತೆ ಚಿತ್ರಿಸಲಾಗಿತ್ತು.

