ಸಮಾಜದ ಅಂಕು ಡೊಂಕು ತಿದ್ದುವ ಪ್ರಯತ್ನ ಮಾಡಿದ ಪುರಂದರ ದಾಸರು

ಮೈಸೂರು: ಪುರಂದರ ದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು ಎಂದು ಖ್ಯಾತ ವೈದ್ಯ ಡಾ॥ ಎಸ್. ಪಿ .ಯೋಗಣ್ಣ ಹೇಳಿದರು.

ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್  ರಾಮಕೃಷ್ಣ ನಗರದ ಎಚ್  ಬ್ಲಾಕ್ ನಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ ಆರಾಧನಾ ಅಂಗವಾಗಿ ಶ್ರೀ ಪುರಂದರ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಹಣ ಐಶ್ವರ್ಯಕ್ಕಿಂತ ಮಾನವೀಯತೆ ಶ್ರೇಷ್ಠ. ಸಂಪತ್ತಿಗಿಂತ ಜ್ಞಾನ ಮುಖ್ಯ. ಪುರಂದರ ದಾಸರು ಸಮಾಜಕ್ಕೆ ಸಂಗೀತ ಶಾಸ್ತ್ರದ ಜ್ಞಾನವನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಹೇಳಿದರು.

ನಂತರ ಮಾತನಾಡಿದ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್. ಬಿ. ವಾಸುದೇವ ಮೂರ್ತಿ ಅವರು,ಸರಳ ಸಜ್ಜನಿಕೆಗೆ ಹೆಸರಾದ ಶ್ರೀ ಪುರಂದರದಾಸರು ಸಮಾಜಕ್ಕೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದರು ಎಂದು ತಿಳಿಸಿದರು.

ಪುರಂದರದಾಸರು 4ಲಕ್ಷ 25ಸಾವಿರ ಕೀರ್ತನೆಗಳನ್ನು ರಚಿಸಿದ್ದಾರೆ ಈ ಕೀರ್ತನೆಗಳಲ್ಲಿ ಪುರಂದರದಾಸರು ಪುರಂದರ ವಿಠಲ ಎಂಬ ಅಂಕಿತನಾಮವನ್ನು ಇಟ್ಟುಕೊಂಡಿದ್ದಾರೆ .ಪುರಂದರದಾಸರು ಹರಿದಾಸ ಸಾಹಿತ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದರು ಎಂದು ಸ್ಮರಿಸಿದರು.

ಕರ್ನಾಟಕ ಸಂಗೀತಕ್ಕೆ ಅವರ ಕೊಡುಗೆ ಅಪಾರವಾಗಿದೆ .ಸಂಗೀತ ಪರಂಪರೆ ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಕೃತಜ್ಞತೆಯಿಂದ ಗುರುತಿಸಿದೆ ಎಂದು ಹೇಳಿದರು.

ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಂಬಿಕಾ ಎಸ್ .ಎಸ್ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ವಿಜಯ್,ವಿವೇಕ್ ಕಶ್ಯಪ್,ವೈದ್ಯರಾದ ನರಕೇಸರಿ ,ನಿವೃತ್ತ ಇನ್ಸ್ ಪೆಕ್ಟರ್ ನಾಗರಾಜು ,ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ ,ರಾಜಗೋಪಾಲ್ ,ಧನಂಜಯ ಮೂರ್ತಿ ಮತ್ತಿತರರು ಹಾಜರಿದ್ದರು.