ಸಾಹುಕಾರ್ ಲೈಂಗಿಕ ದೌರ್ಜನ್ಯದ ತನಿಖಾ ವರದಿ ಸಲ್ಲಿಸಲು ಎಸ್ ಐ ಟಿ ಗೆ ಹೈ ಕೋರ್ಟ್ ಸೂಚನೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಯುವತಿ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ತನಿಖಾ ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸುವಂತೆ ಎಸ್ ಐ ಟಿ ಅಧಿಕಾರಿಗಳಿಗೆ ಹೈ ಕೋರ್ಟ್ ಸೂಚಿಸಿದೆ.

ಎಸ್ ಐ ಟಿ ಅಧಿಕಾರಿಗಳು ಸಲ್ಲಿಸುವ ವರದಿ ಮೇಲೆ ಸಾಹುಕಾರ್ ಭವಿಷ್ಯ ನಿಂತಿದೆ.

ಒಂದು ವೇಳೆ ಬಿ ರಿಪೋರ್ಟ್ ಸಲ್ಲಿಕೆಯಾದರೆ ಸಾಹುಕಾರ್ ಬಚಾವಾಗಲಿದ್ದಾರೆ. ಆರೋಪ ಮುಕ್ತರಾಗಲಿದ್ದಾರೆ. ಇಲ್ಲದಿದ್ದರೆ ಚಾರ್ಜ್ ಶೀಟ್ ಸಲ್ಲಿಕೆಯಾದರೆ ಅವರು ತೊಂದರೆಗೆ ಸಿಲುಕಲಿದ್ದಾರೆ. ಅವರ ಸಚಿವ ಸ್ಥಾನದ ಆಸೆ ಈಡೇರಲಾರದು.

ಇದೆಲ್ಲವೂ ಈಗ ಎಸ್ ಐ ಟಿ ರಿಪೋರ್ಟ್ ಮೇಲೆ ನಿಂತಿದೆ.