ಹಿಜಬ್ ಘಟನೆ ಹಿಂದೆ ಆಡುತ್ತಿರುವವರ ಆಟವನ್ನು ನಿಲ್ಲಿಸುತ್ತೇವೆ -ಆರಗ ಜ್ಞಾನೇಂದ್ರ

ಬೆಂಗಳೂರು : ಹಿಜಬ್ ಘಟನೆ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಆಗುತ್ತಿದೆ. ಅವರ ಈ ಆಟವನ್ನ ಇಲ್ಲಿಗೇ ನಿಲ್ಲಿಸುತ್ತೇವೆ. ಆ ಶಕ್ತಿ ನಮಗೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ  ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕೆಲವರಿಂದ ದೇಶ ಒಡೆಯುವ ಕೆಲಸವಾಗುತ್ತಿದೆ. ಈ ಆಟದ ಹಿಂದೆ ರಾಜಕೀಯ ಪಕ್ಷಗಳು ಮತ್ತು ಕೆಲ ಸಂಘಟನೆಗಳಿವೆ‌ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಹಿತಿಗಳಿಲ್ಲದೆ ಮಾತಾಡಿದ್ದಾರೆ. ಕಾಲೇಜಿನ ಆವರಣದಲ್ಲಿ ಯಾವುದೇ ಧ್ವಜ ಇರಲಿಲ್ಲ,  ಅವರು ಬೇಜವಾಬ್ದಾರಿಯಾಗಿ ಮಾತನಾಡಬಾರದು. ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸವನ್ನು ಹೀಗೇ ಮಾಡುತ್ತಿದ್ದರೆ ಜನರು ಅವರನ್ನು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಹೇಳಿದರು

ಮತೀಯ ಭಾವನೆಗಳನ್ನು ಮಕ್ಕಳಲ್ಲಿ ತುಂಬಬಾರದು. ನಮ್ಮ ಪೊಲೀಸರು ಬಹಳ ಸಂಯಮದಿಂದ ವರ್ತಿಸಿದ್ದಾರೆ ಅವರ ಜವಾಬ್ದಾರಿ ನಿಭಾಯಿಸಲು ಬಿಡಿ ಎಂದು ಆರಗ ಜ್ಞಾನೇಂದ್ರ ಹೇಳಿದರು.