ಮಂಗಳೂರಿನಿಂದಲೇ ಪಕ್ಷ ಸಂಘಟನೆ ಆರಂಭ – ಎಚ್. ಡಿ. ದೇವೇಗೌಡ

ಬೆಂಗಳೂರು: ಮಂಗಳೂರಿನಲ್ಲಿ ನಮ್ಮ ಶಕ್ತಿ ಕಡಿಮೆಯಿದೆ, ಅಲ್ಲಿಂದಲೇ ಪಕ್ಷ ಸಂಘಟನೆ ಆರಂಭಿಸಿದ್ದೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ, ಜಲಧಾರೆ ಕಾರ್ಯಕ್ರಮ ಮಾಡ್ತಿದ್ದೇವೆ, ತಿಂಗಳಲ್ಲಿ ಕನಿಷ್ಟ ಎರಡು ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ನಾನು ಮಂಗಳೂರಿಗೆ ಹೋದ ಮೇಲೆ ಕನಿಷ್ಠ ನೂರಾರು  ಜನ ಕಾರ್ಯಕರ್ತರು ಲವಲವಿಕೆಯಿಂದ ಸೇರಿದ್ದರು.

ಕೇವಲ 123 ಅಂತಾ ಬೋರ್ಡ್ ಹಾಕಿಕೊಂಡರೆ ಆಗಲ್ಲ ಕೆಲಸ ಮಾಡಬೇಕು ಎಂದು ಹೇಳಿದರು.

ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರ ಸಭೆಗಳನ್ನು ಮಾಡ್ತಿದಾರೆ. ಜಲಧಾರೆ ಕಾರ್ಯಕ್ರಮ ಮಾಡ್ತಿದಾರೆ.

ಕೇವಲ 123 ಅಂತಾ ಬೋರ್ಡ್ ಹಾಕಿಕೊಂಡರೆ ಆಗಲ್ಲ,ಕೆಲಸ ಮಾಡಬೇಕು ಎಂದರು.

ಹಾಸನದಲ್ಲಿ ಕಾರ್ಯಕ್ರಮ ಮಾಡಿದಾಗ ಶಿವಲಿಂಗೇ ಗೌಡ ಬಂದಿರಲಿಲ್ಲ ಎ. ಟಿ. ರಾಮಸ್ವಾಮಿ  ಕೂಡಾ ಕಾರ್ಯನಿಮಿತ್ತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ  ರಾಮಸ್ವಾಮಿ ಪಕ್ಷದಲ್ಲಿ ಇರಲು ಆಗಲ್ಲ ಅಂದ್ರೆ ಹೋಗಬಹುದು ಎಂದಿದ್ದೇನೆ ಎಂದು ಪತ್ರಿಕೆ ಯೊಂದರಲ್ಲಿ ಬಂದಿದೆ ಅದ್ಯಾಕೆ ಈ ರೀತಿ ಬರೆದರೋ ಗೊತ್ತಿಲ್ಲ ಎಂದು ದೇವೇಗೌಡ ಹೇಳಿದರು.

ಪಕ್ಷ ಬಿಟ್ಟು ಹೋಗಲು ಮನಸು ಮಾಡಿರುವವರಿಗೆ ಈಗಲೂ ಮನವಿ ಮಾಡ್ತೀನಿ ಐಕ್ಯತೆ ಯಿಂದ ಕೆಲಸ ಮಾಡೋಣ ಬನ್ನಿ ಎಂದು ಕರೆ ನೀಡಿದರು.

ಕುಮಾರಸ್ವಾಮಿ ಅವರು ಯಾಕೆ ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಬೇಕು. ರಾಮನಗರ, ಚನ್ನಪಟ್ಟಣ ಬಿಟ್ಟು ಬೇರೆ ಕಡೆ ಯಾಕೆ ಹೋಗಬೇಕು ಹೇಳಿ ಎಂದು ಮಾಧ್ಯಮದವರಿಗೇ ಪ್ರಶ್ನೆ ಹಾಕಿದರು.

ಚನ್ನಪಟ್ಟಣ ದಲ್ಲಿ ಸ್ಪರ್ಧೆ ಮಾಡಿ ಗೆದ್ದಿದಾರೆ ಅಲ್ಲಿಂದಲೇ ಸಿಎಂ ಕೂಡಾ ಆಗಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದಲೇ ಸ್ಪರ್ಧೆ ಮಾಡಲಿ ಅನ್ನುವುದೂ ನನ್ನ ಅಭಿಪ್ರಾಯ‌ ಎಂದರು.

ನಿಖಿಲ್ ಈಗ ಸಿನಿಮಾ ಜಗತ್ತಿನಲ್ಲಿ ಇದ್ದಾರೆ. ಯುವ ಜನತಾದಳದ ಅಧ್ಯಕ್ಷ ಆಗಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅಂತಿಮವಾಗಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ ಎಂದು ಗೌಡರು ತಿಳಿಸಿದರು.