ಬೆಂಗಳೂರು: ಹಿಜಬ್ ಧರಿಸಲು ಅವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಗುರುವಾರ ಕೂಡಾ ಮುಂದುವರಿಯಿತು.
ಹಿಜಬ್ ವಿವಾದ ಸಂಬಂಧ ಹಲವು ಪಿಐಎಲ್ ಅರ್ಜಿಗಳು ಸಲ್ಲಿಕೆಯಾಗಿದ್ದು ಮೊದಲು ಅವರುಗಳಿಗೆ ವಾದ ಮಂಡಿಸಲು ಹೈಕೋರ್ಟ್ ತ್ರಿಸದಸ್ಯ ಪೀಠ ಅನುಮತಿ ನೀಡಿತು,ಆದರೆ ಕೆಲವು ಅರ್ಜಿಗಳು ವಜಾಗೊಂಡವು.
ಮೊದಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ರೆಹಮತ್ ಉಲ್ಲ ಕೊತ್ವಾಲ್ ವಾದ ಮಂಡಿಸಲು ಮುಂದಾದರು.
ಆದರೆ ಅವರು ಸಲ್ಲಿಸಿದ ಪಿ ಐ ಎಲ್ ತಾಂತ್ರಿಕ ದೋಷದಿಂದ ಕೂಡಿತ್ತು, ನೀವು ಹೈಕೋರ್ಟ್ ನ ಪಿ ಐ ಎಲ್ ನಿಯಮಗಳನ್ನು ಪಾಲಿಸಿದ್ದೀರ ಎಂದು ನ್ಯಾಯಾಧೀಶರಾದ ಕೃಷ್ಣ ಎಸ್.ದೀಕ್ಷಿತ್ ಪ್ರಶ್ನಿಸಿದರು.
ರೆಹಮತ್ ಅವರ ಅರ್ಜಿಯನ್ನು ತಾಂತ್ರಿಕ ಕಾರಣಗಳಿಂದ ತ್ರಿಸದಸ್ಯ ಪೀಠ ವಜಾಗೊಳಿಸಿತು.
ನಂತರ ಪಿ ಐ ಎಲ್ ಪರ ಡಾ.ವಿನೋದ್ ಜಿ.ಕುಲಕರ್ಣಿ ಅವರು ವಾದ ಪ್ರಾರಂಭಿಸಿದರು. ಅವರಿಗೂ ನಿಯಮಗಳನ್ನು ಪಾಲಿಸಿದ್ದೀರ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಕುಲಕರ್ಣಿ ಅವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಗೀತೆಯೊಂದನ್ನು ಹಾಡಿ
ವಾದ ಮಂಡಿಸಿದರು,ಕೇವಲ ಒಂದೆರಡು ನಿಮಿಷ ಮಾತನಾಡಿದರು.
ನಂತರ ಎ.ಎಂ ಧರ್ ವಾದ ಮಂಡಿಸಲು ಮುಂದಾದರು.ಅವರ ಅರ್ಜಿಯಲ್ಲೂ ತಾಂತ್ರಿಕ ದೋಷ ಇದ್ದುದರಿಂದ ಶುಕ್ರವಾರ ಮತ್ತೆ ಸಲ್ಲಿಸಲು ಪೀಠ ಒಪ್ಪಿಗೆ ನೀಡಿತು. ಅವರ ಅರ್ಜಿಯನ್ನು ವಜಾಗೊಳಿಸಲಾಯಿತು.
ಈ ವೇಳೆ ಸರ್ಕಾರದ ಪರ ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಶುಕ್ರವಾರ ವಾದ ಮಂಡಿಸುವುದಾಗಿ ಮನವಿ ಮಾಡಿದರು.
ಇದಾದ ನಂತರ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪರ ಜಿ.ಆರ್.ಮೋಹನ್ ಎಂಬವರು ವಾದ ಮಂಡಿಸಿದರು.
ಹಿಜಬ್ ನಿರ್ದೇಶನ ನಮಗೆ ಅನ್ವಯ ಆಗುವುದಿಲ್ಲ,ಈ ಬಗ್ಗೆ ನಾವು ಮಧ್ಯಂತರ ಅರ್ಜಿಸಲ್ಲಿಸಿದ್ದೇವೆ ಎಂದು ಹೇಳಿದರು.
ಕಡೆಗೆ ವಿಚಾರಣೆಯನ್ನು ಶುಕ್ರವಾರ ಮದ್ಯಾಹ್ನ 2.30ಕ್ಕೆ ತ್ರಿಸದಸ್ಯ ಪೀಠ ಮುಂದೂಡಿತು.

