ಕೆ.ಪಿ. ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್‌ ಲೋಕಾಯುಕ್ತ ಬಲೆಗೆ‌

ಬೆಂಗಳೂರು: ಪ್ರಕರಣವೊಂದರಿಂದ ಕೈಬಿಡಲು ಲಂಚದ ಹಣ ಪಡೆಯುವಾಗ ಕೆ.ಪಿ. ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್‌ ಲೋಕಾಯುಕ್ತ ಬಲೆಗೆ‌ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.

ಇನ್‌ಸ್ಪೆಕ್ಟರ್ ಗೋವಿಂದರಾಜು ಲೋಕಾ ಬಲೆಗೆ ಒಳಗಾದವರು.

ಟ್ರ್ಯಾಪ್‌ಗೂ ಮುನ್ನ ಆರೋಪಿಗಳ ಬಂಧನಕ್ಕೆ ತೆರಳಿದ್ದ ಇನ್ಸ್ಪೆಕ್ಟರ್, ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಬಂಧನ ಕಾರ್ಯಾಚರಣೆ ನಡೆಸಿದ್ದರು. ಪ್ಲಾಟ್‌ನಲ್ಲಿ ಆರೋಪಿಗಳು ಪ್ರತಿರೋಧ ತೋರಿದ್ದರು. ಪೊಲೀಸರು ಮನೆಗೆ ಬರುವ ಸಿಸಿಟಿವಿ ಹಾಗೂ ವೀಡಿಯೋ ಮಾಡಿದ್ದರು. ನೋಟಿಸ್ ಕೊಡದೇ ಬಂದಿದ್ದೀರಾ, ನಾವು ಲಾಯರ್ ಬಳಿ ಮಾತನಾಡುತ್ತೇವೆ ಎಂದು ಆರೋಪಿಗಳು ಪಟ್ಟುಹಿಡಿದಿದ್ದರು. ಪೊಲೀಸರು ಬಳಿಕ ಹೊಯ್ಸಳ ಕರೆಯಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು.

ಸ್ಟೇಷನ್‌ಗೆ ಹೋದ ಮೇಲೆ ಡೀಲ್ ಮಾಡಿದ್ದರು. ಕೇಸ್‌ನಿಂದ ಕೈ ಬಿಡಲು ಐದು ಲಕ್ಷ ನೀಡುವಂತೆ ಇನ್ಸ್ಪೆಕ್ಟರ್‌ ಹೇಳಿದ್ದರು.

ಮೊದಲು ಒಂದು ಲಕ್ಷ ಹಣ ತರಿಸಿಕೊಂಡಿದ್ದರು. ನಂತರ ನಾಲ್ಕು ಲಕ್ಷ ಹಣ ತರುವಂತೆ ಸೂಚನೆ ನೀಡಿದ್ದರು. ನಾಲ್ಕು ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಇನ್ಸ್ಪೆಕ್ಟರ್ ಬಿದ್ದಿದ್ದಾರೆ. ಮೈಸೂರು ರಸ್ತೆ ಸಿಎಆರ್ ಗ್ರೌಂಡ್ ಬಳಿ ಇನ್‌ಸ್ಪೆಕ್ಟರ್ ಅನ್ನು ಬಲೆಗೆ ಕೆಡವಲಾಗಿದೆ.

ಇನ್‌ಸ್ಪೆಕ್ಟರ್ ಗೋವಿಂದರಾಜು ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.