ಬೆಂಗಳೂರು: ಹಿಜಬ್ ವಿವಾದ ಸಂಬಂಧ ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠದಲ್ಲಿ ಮತ್ತೆ ವಿಚಾರಣೆ ಪ್ರಾರಂಭವಾಯಿತು.
ವಾದವನ್ನು ಆಲಿಸಿದ ಪೂರ್ಣ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಮೊದಲಿಗೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದರು.
ನಾವಡಗಿ ಅವರು ಹಲವು ಉದಾಹರಣೆಗಳು ವಿವಿಧ ರಾಷ್ಟ್ರಗಳ ತೀರ್ಪುಗಳನ್ನು ಉಲ್ಲೇಖಿಸಿದರು.
ಯಾವದೋ ಕಾರಣಕ್ಕೆ ಬೆಳೆದುಬಂದ ಆಚರಣೆಗೆ ಸಂವಿದಾನಾತ್ಮಕ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದು ವಾದಿಸಿದರು.
ಹಿಜಬ್ ವಿಚಾರಣೆಯನ್ನು ಮಂಗಳವಾರ ಮದ್ಯಾಹ್ನ 2.30ಕ್ಕೆ ಹೈಕೋರ್ಟ್ ಪೂರ್ಣ ಪೀಠ ಮುಂದೂಡಿದೆ.

