ಬೆಂಗಳೂರು: ರಷ್ಯಾ – ಉಕ್ರೇನ್ ಯುದ್ದದಲ್ಲಿ ಕರ್ನಾಟಕದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲೆ ಹಾವೇರಿಯ ನವೀನ್ ಮೃತಪಟ್ಟ ನತದೃಷ್ಟ ವಿದ್ಯಾರ್ಥಿ.
ಉಕ್ರೇನ್ ನ ಕಾರ್ಖೀವ್ ನಲ್ಲಿ ಈತ ನಾಲ್ಕನೆ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.
ಅವರು ಸಾಮಾನು ತರಲು ಸೂಪರ್ ಮಾರ್ಕೆಟ್ ಗೆ ಹೋಗಿದ್ದಾಗ ಪಿರಂಗಿ ದಾಳಿ ನಡೆದಿದ್ದು ಅಲ್ಲೇ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.ನವೀನ್ ನಿಧನದ ಸುದ್ದಿ ತಿಳಿದು ಪೋಷಕರ ದುಃಖದ ಕಟ್ಟೆ ಒಡೆದಿದೆ.ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

