ಪೊಲೀಸ್ ಅಧಿಕಾರಿಗಳ ವೇತನ ತಾರತಮ್ಯ ನಿವಾರಣೆಗೆ ಕ್ರಮ -ಆರಗಜ್ಞಾನೇಂದ್ರ

ತುಮಕೂರು: ಪೊಲೀಸ್ ಅಧಿಕಾರಿಗಳ ವೇತನ ತಾರತಮ್ಯ ನಿವಾರಣೆಗೆ ಇಲಾಖೆ ಕ್ರಮವಹಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಗುರುವಾರ ತುಮಕೂರಿನಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಔರಾಧಕರ್ ವರದಿ ಅನುಷ್ಠಾನ ಬಜೆಟ್ ನಲ್ಲಿ ಬರಬೇಕೆಂದೇನೂ ಇಲ್ಲ, ಅಂದಿನ ಕಾಂಗ್ರೆಸ್ ಸರಕಾರ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ, ಹಿರಿಯ ಪೊಲೀಸರಿಗೆ- ಅಧಿಕಾರಿಗಳಿಗೆ ತೊಂದರೆಯಾಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಈಗ ಅದನ್ನು ಸರಿದೂಗಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಲಿದೆ ಎಂದರು.

ಹಿಂದೂ ಪರ ಕಾರ್ಯಕರ್ತ ಶಿವಮೊಗ್ಗ ಹರ್ಷ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ನವರ ಕಾಲದಲ್ಲಿ ಸತ್ತವರ ಕುಟುಂಬಗಳಿಗೆ ಟಿಕೆಟ್  ಕೊಟ್ಟಿದ್ದರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದೆ, ಆಧಾರ ರಹಿತ ಟೀಕೆ ಮಾಡುತ್ತಿದೆ, ಹರ್ಷ ಕುಟುಂಬಕ್ಕೆ  ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ಮತ್ತು ಬಿಜೆಪಿ ಕೊಡುತ್ತದೆ ಎಂದು ಆರಗಜ್ಞಾನೇಂದ್ರ ಹೇಳಿದರು.

ಹರ್ಷ ತಾಯಿ ಅವರ ಆಸೆಯಂತೆ, ಆತನ ಸಾವನ್ನು ವ್ಯರ್ಥವಾಗಲು ಬಿಡುವುದಿಲ್ಲ, ಆಕೆ ಟಿಕೆಟ್ ಕೇಳಿಲ್ಲ, ಅವನು ಒಂದು ಉದ್ದೇಶಕೋಸ್ಕರ ಸತ್ತಿದ್ದಾನೆ, ಅದಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿದ್ದಾರೆ ಅದನ್ನ ನಾವು ಮಾಡುತ್ತಾ ಇದ್ದೇವೆ ಎಂದರು.