ಮೈಸೂರು: ಜನೌಷಧಿ 4 ವರ್ಷದ ದಿವಸ್ ಅಂಗವಾಗಿ ಮೈಸೂರಿನಲ್ಲಿ 7 ದಿನಗಳ ಕಾಲ ಸಾರ್ವಜನಿಕರಿಗೆ ಜನೌಷಧಿ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಶನಿವಾರ ಮೈಸೂರಿನ ಜನೌಷಧಿ ಕೇಂದ್ರ ಮಾಲೀಕರ ಸಂಘದ ವತಿಯಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ
ಜನ ಔಷಧಿ ಮಿತ್ರ ಬನಾವೋ ಎಂಬ ಕಾರ್ಯಕ್ರಮವು ಆಯೋಜಿಸಲಾಗಿತ್ತು.
ನಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರುಗಳನ್ನು ಜನೌಷಧಿ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಸಾರ್ವಜನಿಕರಿಗೆ ಉಚಿತವಾಗಿ ಅವರಿಗೆ ಉಪಯುಕ್ತವಾದ ಜನೌಷಧಿಯನ್ನು ವಿತರಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿಶ್ವಮಾನವ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಗೌಡ ,ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,ಜೀವದಾರ ರಕ್ತನಿಧಿ ಕೇಂದ್ರದ ಅಧ್ಯಕ್ಷ ಗಿರೀಶ್,ಆಶಾದಾಯಕ ಟ್ರಸ್ಟ್ ಅಧ್ಯಕ್ಷ ಸುರೇಶ್,ಸಾಮಾಜಿಕ ಕಾರ್ಯಕರ್ತ ಪುನೀತ್ ಕುಮಾರ್,ನಿವೃತ್ತ ಯೋಧರಾದ ಬಾಲಸುಬ್ರಹ್ಮಣ್ಯ ಅವರುಗಳನ್ನು
ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಜನೌಷಧಿ ಕೇಂದ್ರದ ಮಾಲೀಕರಲ್ಲಿ ಪ್ರಮುಖರಾದ ಉಮೇಶ್, ಭಾರತದಾದ್ಯಂತ 8657 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರಸಕ್ತ ಸಾಲಿನ ವರ್ಷದಲ್ಲಿ 1118ಹೊಸ ಕೇಂದ್ರಗಳು ತೆರೆದಿವೆ ಎಂದು ಹೇಳಿದರು.
ಮೈಸೂರಿನಲ್ಲಿ 30 ಕೇಂದ್ರಗಳು ತೆರೆದಿವೆ, ಒಟ್ಟು 1480ತರಹದ ಔಷಧಗಳು ಲಭ್ಯವಿರುತ್ತದೆ 250ತರಹದ ಸರ್ಜಿಕಲ್ ವಸ್ತುಗಳು ಸಿಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ (ಜೆನೆರಿಕ್) ಕೇಂದ್ರದ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ವಿವಿಧ ಮಳಿಗೆ ಮತ್ತು ಆಸ್ಪತ್ರೆಗಳಲ್ಲಿ ದೊರೆಯುವ ಔಷಧಿಗಳ ದರಕ್ಕೆ ಹೋಲಿಸಿದರೆ ಶೇ 50 ರಿಂದ 80ಕ್ಕೂ ಕಡಿಮೆ ದರದಲ್ಲಿ ಎಲ್ಲಾ ರೀತಿಯ ಔಷಧಿಗಳು ಇಲ್ಲಿ ಲಭ್ಯ ಇವೆ ಎಂದು ಹೇಳಿದರು.
ಜನೌಷಧಿ ಕೇಂದ್ರದಲ್ಲಿ ಎಲ್ಲ ರೀತಿಯ ಕಾಯಿಲೆ ಮತ್ತು ಅನಾರೋಗ್ಯ ಸಮಸ್ಯೆಗಳಿಗೆ ಔಷಧಿ ಲಭ್ಯವಿದೆ ಎಂಬ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಮೂಡಿಸಬೇಕಿದೆ. ಈ ಮಹತ್ವದ ಕಾರ್ಯವನ್ನು ಕೇಂದ್ರದ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಜನೌಷಧಿ ಮಾಲೀಕರು ಗಳಾದ ಕಿಶೋರ್ ಕುಮಾರ್ ,ಉಮೇಶ್ ,ಮಲ್ಲೇಶ್ ,ಲಕ್ಷ್ಮಿ ,ದೀಪ ,ವೀರಪ್ಪಗೌಡ ,ಗಿರಿಜಾ ,ರಾಧಾಕೃಷ್ಣ ,ಪ್ರಶಾಂತ್ ,ಹರ್ಷ ,ತುಳಸಿ ,ನಾಗಮಣಿ ,ರೇಖಾ ಶ್ರೀನಿವಾಸ್, ವಿದ್ಯಾ ,ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.

