ಎಲ್ಲಾ ದಾಖಲೆ ಉಡೀಸ್-ಇದು ಜೇಮ್ಸ್ ಹವಾ

ಬೆಂಗಳೂರು: ಕರ್ನಾಟಕದ ಶೇ. 80ಕಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಮೂರ್ನಾಲ್ಕು ದಿನಗಳವರೆಗೆ ಬುಕ್ಕಿಂಗ್ ಆಗಿ, ಎಲ್ಲಾ ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಹಾಕುವೆ, ಇದು ಅಪ್ಪು ಅಭಿನಯದ ಜೇಮ್ಸ್‌ ಚಿತ್ರದ ದಾಖಲೆ.

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿರುವ  ಜೇಮ್ಸ್, ಭಾರತ ಸಿನಿ ಇತಿಹಾಸದ ಸ್ವರ್ಣ ಪುಟಗಳಲ್ಲಿ ಪಡಿಮೂಡಿದೆ.

ಕೇವಲ ಕನ್ನಡಿಗರಷ್ಟೇ ಅಲ್ಲ ಭಾರತದ ಎಲ್ಲಾ ಭಾಷೆಯ ಸಿನಿಪ್ರೇಮಿಗಳು ಅಪ್ಪು ಅವರನ್ನು ಪರದೆಯ ಮೇಲೆ ನೋಡಿ ಆನಂದಿಸುತ್ತಾ ರಾಜಕುಮಾರನಿಗೆ ಜೈಕಾರ ಹೇಳುತ್ತಿದ್ದಾರೆ.

ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ 12 ವಿದೇಶಗಳಲ್ಲಿ ಬಿಡುಗಡೆಯಾಗಿರುವ ಜೇಮ್ಸ್  ಚಿತ್ರವನ್ನು ಅಲ್ಲಿ ಬರೀ ಕನ್ನಡಿಗರಷ್ಟೇ ಅಲ್ಲದೆ ಎಲ್ಲಾ ಭಾರತೀಯರು, ವಿದೇಶಿಗರು ವೀಕ್ಷಣೆ ಮಾಡುತ್ತಿದ್ದಾರೆ.

ಇದರ ಜೊತೆಗೆ ಬೈಕ್ ರ್ಯಾಲಿ, ಕಾರ್ ರ್ಯಾಲಿಗಳನ್ನು ಮಾಡುವ ಮೂಲಕ ದೊಡ್ಮನೆ ಹುಡುಗನಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿಮಾನದ ಸನ್ಮಾನ ಭಾರತದ ಯಾವ ಚಿತ್ರ ನಟನೆಗೂ ಸಿಕ್ಕಿರಲಿಲ್ಲ ಎಂದು ಎಲ್ಲಾ ಚಿತ್ರರಂಗದ ದಿಗ್ಗಜರು ಮಾತನಾಡಿಕೊಳ್ಳುತ್ತಿದ್ದಾರೆ.

ನಿರ್ದೇಶಕ ಚೇತನ್ ಜೇಮ್ಸ್  ಚಿತ್ರದ ಮೂಲಕ ಅಪ್ಪು ಅವರನ್ನು ಬೇರೊಂದು ಆಯಾಮದಲ್ಲಿ ಬಿಂಬಿಸಿದ್ದಾರೆ.

ಪ್ರಪಂಚದ ಉದ್ದಗಲಕ್ಕೂ ವ್ಯಾಪಿಸಿರುವ ಡ್ರಗ್ಸ್ ಮಾಫಿಯಾ ಒಳಗೆ ನಾಯಕನ ಎಂಟ್ರಿ, ಹೀರೋ ಮೊದಲು ಮಿಲಿಟರಿ ಖಡಕ್ ಆಫೀಸರ್. ಸೈನಿಕ ಸಮವಸಗತ್ರವನ್ನು ಕಳಚಿ ಮಾಫಿಯಾ ಸೆದೆಬಡಿಯಲು ಏಕೆ ನಿರ್ಧರಿಸುತ್ತಾನೆ ಎಂಬ ಕುತೂಹಲಗಳ ಮೇಲೆ ಸಾಗುವ ಕಥೆಗೆ ಅಪ್ಪು ಜೀವ ಕೊಟ್ಟು ಮೆರಗು ತುಂಬಿದ್ದಾರೆ.

ಜೇಮ್ಸ್‌ ಕೆಜಿಎಫ್‌ ಚಿತ್ರದ ದಾಖಲೆಯನ್ನೂ ಉಡೀಸ್ ಮಾಡಿ ಮುನ್ನುಗ್ಗುತ್ತಿದೆ.