ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದ್ದು, 18 ವರ್ಷದ ಯುವತಿಯನ್ನು ಅಪಹರಿಸಲು ಯತ್ನಿಸಿ ವಿಫಲಗೊಂಡಿದ್ದರಿಂದ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಪೂಜಾ ವೋಡ್ ಹತ್ಯೆಗೀಡಾಗಿರುವ ಯುವತಿ.
ತನ್ನನ್ನು ಅಪಹರಿಸಲು ಬಂದ ದಾಳಿಕೋರರಿಗೆ ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ಆಕೆಯನ್ನು ಗುಂಡಿಕ್ಕಿ ನಡುರಸ್ತೆಯಲ್ಲೇ ಹತ್ಯೆ ಮಾಡಲಾಗಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಮಹಿಳೆಯರನ್ನು ಸಿಂಧ್ ಪ್ರಾಂತ್ಯದಲ್ಲಿ ಅಪಹರಿಸಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದೆ. ಅಲ್ಲದೆ ಬಲವಂತವಾಗಿ ಅಂತ ಧರ್ಮೀಯ ವಿವಾಹಗಳನ್ನು ಕೂಡ ಮಾಡಲಾಗುತ್ತಿದೆ.

