ಬೆಂಗಳೂರು: ಬೆಂಗಳೂರಿನ ಗೌರಿಪಾಳ್ಯದಲ್ಲಿ ನಡೆದಿದ್ದ ಚಂದ್ರು ಕೊಲೆ ಪ್ರಕರಣ ಸಂಬಂಧ ಪೊಲೀಸ್ ಕಮಿಷನರ್ ಕಮಲ್ ಪಂತ್ ಸುಳ್ಳು ಹೇಳಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಚಂದ್ರು ಕೊಲೆ ನಡೆದ ಸ್ಥಳದಲ್ಲಿ ಆತನ ಸ್ನೇಹಿತ ಸೈಮನ್ ಇದ್ದರು. ಅವರೂ ಕೂಡಾ ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಕಮಲ್ ಪಂತ್ ಈ ಪ್ರಕರದ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದರು.
ಚಂದ್ರುವಿನ ತಾಯಿ ಹಾಗೂ ಚಿಕ್ಕಮ್ಮ ಸಂಬಂಧಿಗಳು ಮತ್ತು ಸೈಮನ್ ಸತ್ಯವನ್ನೇ ಹೇಳಿದ್ದಾರೆ ಉರ್ದು ಬರಲ್ಲ ಎಂದು ಹೇಳಿದ್ದಕ್ಕೇನೆ ಕೊಲೆ ನಡೆದಿದೆ, ಅಪಘಾತದಿಂದ ಚಂದ್ರು ಮೃತಪಟ್ಟಿಲ್ಲ ಎಂಬುದೇ ಸತ್ಯ ಎಂದು ತಿಳಿಸಿದರು.
ಆದರೆ ನಗರ ಪೊಲೀಸ್ ಆಯುಕ್ತರು ಸುಳ್ಳು ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ರವಿಕುಮಾರ್ ಒತ್ತಾಯಿಸಿದರು.

