ಬೆಂಗಳೂರು: ರಾಜ್ಯದಲ್ಲಿ ಅಜಾನ್ ಗೆ ಪ್ರತಿಯಾಗಿ ಭಜನೆ ಸಮರ ಮುಂದುವರೆದಿದ್ದು, ಮೇ.9 ರೊಳಗೆ ಮಸೀದಿಗಳಲ್ಲಿ ಅಜಾನ್ ಕೂಗು ನಿಲ್ಲಿಸುವಂತೆ ಸರ್ಕಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಡೆಡ್ ಲೈನ್ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಮುತಾಲಿಕ್, ಸರ್ಕಾರಕ್ಕೆ ಧಮ್ ಇಲ್ವಾ ಯು.ಪಿ.ಮುಖ್ಯ ಮಂತ್ರಿ ಯೋಗಿಯಂತೆ ಯಾಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಮುಸ್ಲಿಮರು ಅಂದ್ರೆ ಎಲ್ಲಾ ಪಕ್ಷದವರು ಏಕೆ ಹೆದರಿಕೊಳ್ಳುತ್ತಾರೆ. ಅವರನ್ನು ಕಂಡರೆ ಭಯಪಡುವಂತದ್ದು ಏನಿದೆ, ತಪ್ಪು ಮಾಡಿದಾಗಲೂ ಅವರ ವಿರುದ್ದ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ. ಆದರೆ ಮೇ 9ರೊಳಗೆ ಮಸೀದಿಗಳ ಅಜಾನ್ ಕೂಗು ನಿಲ್ಲಬೇಕು. ಇಲ್ಲದಿದ್ದರೆ ದೇವಸ್ಥಾನಗಳಲ್ಲಿ ಮಂತ್ರ ಘೋಷ, ಭಜನೆ ಮಾಡಲಾಗುತ್ತದೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.

