ಮೈಸೂರು: ಮೈಸೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಶ್ರೀಘ್ರದಲ್ಲಿ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.
ವಿಶ್ವವಿಖ್ಯಾತಿಯ ದೇಶದ ಮೊದಲ ವಿಶ್ವವಿದ್ಯಾನಿಲಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದು ಇದು ಇಡೀ ಪ್ರಪಂಚದಲ್ಲಿಯೇ ಮನ್ನಣೆ ಪಡೆದಿದೆ.
ಮೈಸೂರಿನ ರಾಜಮಹಾರಾಜರು ನಿರ್ಮಾಣ ಮಾಡಿರುವ ಮಹಾರಾಜ, ಮಹಾರಾಣಿ ಸರ್ಕಾರಿ ಕಾಲೇಜುಗಳಿಂದ ಬಹಳಷ್ಟು ಮಂದಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕುತ್ತಿದೆ.
ಇಷ್ಟೆಲ್ಲಾ ಇತಿಹಾಸವಿರುವ, ರಾಜ್ಯದ ಮೊದಲ ರಾಜಧಾನಿಯಾಗಿದ್ದ, ರಾಜಮಹಾರಾಜರುಗಳು ಆಳಿದ ನಮ್ಮ ಮೈಸೂರು ನಗರದಲ್ಲಿಯೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿರುವ ಅನೇಕ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು, ಇತರೆ ಶುಲ್ಕ ನೆಪದಲ್ಲಿ ಮಿತಿಮೀರಿ ಹಣ ಕಟ್ಟಿಸಿಕೊಂಡು ಬಡವಿದ್ಯಾರ್ಥಿಗಳ ಹಾಗೂ ಗ್ರಾಮೀಣ ಭಾಗದಿಂದ ಬಂದ ರೈತರ ಮಕ್ಕಳ ರಕ್ತ ಹೀರುತ್ತಿವೆ.
ಮುಖ್ಯಮಂತ್ರಿಗಳು ಕೂಡಲೇ ಮೈಸೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮೈಸೂರಿನಲ್ಲಿರುವ ಬಡವಿದ್ಯಾರ್ಥಿಗಳಿಗೆ ಅಗತ್ಯವಾದ ಸುಸಜ್ಜಿತ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾಲೇಜಿನಲ್ಲಿ ಹಾಸ್ಟೆಲ್, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಅತ್ಯಾಧುನಿಕ ರೀತಿಯಲ್ಲಿ, ಶೈಲಿಯಲ್ಲಿ ಕಾಲೇಜು ತಲೆಯೆತ್ತಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ಪ್ರಮುಖರಾದ ಸಿ. ಜಿ ಗಂಗಾಧರ್, ಡಾ. ಶಾಂತರಾಜೇಅರಸ್, ಮರಿಸ್ವಾಮಿ, ಮೊಗಣ್ಣಾಚಾರ್,ಪ್ರಜೀಶ್ ಪಿ, ದರ್ಶನ್ ಗೌಡ, ಬಂಗಾರಪ್ಪ, ಎಳನೀರು ರಾಮಣ್ಣ, ಯೋಗೀಶ್ ಉಪ್ಪಾರ, ವಿಜಯೇಂದ್ರ, ಮಧುವನ ಚಂದ್ರು, ಮಹದೇವಸ್ವಾಮಿ, ಬಸವರಾಜು, ರಘು, ಅನಿಲ್, ಮಂಜುನಾಥ,ರಾಮನಾಯಕ್,ಅಂಬಾ ಅರಸ್, ರಾಧಾಕೃಷ್ಣ, ಸುಜಾತ ದುರ್ಗೇಶ್ ಪಿ.ಎಸ್. ನಂದ ಕುಮಾರ್ ಸಿಎಂಆರ್, ಇಂದಿರಾ, ಶ್ರೀನಿವಾಸ್, ಪ್ರಭಾಕರ, ಗಣೇಶ್ ಪ್ರಸಾದ್, ಸುಂದರಪ್ಪ, ಗೊರೂರು ಮಲ್ಲೇಶ್, ದೀಪಕ್, ಮನುನಾಯಕ, ಸುಬ್ಬೇಗೌಡ, ಜಗದೀಶ್ ಪಿ, ವಿಜಯದೇವರಾಜೇಅರಸ್, ಕಲೀಂ, ರಮೇಶ್, ಪಣ್ಯದುಂಡಿ ರಾಜು ಪಾಲ್ಗೊಂಡಿದ್ದರು.

