ಆಟೋ ರಿಕ್ಷಾ ಚಾಲಕರಿಗೆ ಕ್ಯೂ ಆರ್ ಕೋಡ್ ಆಧಾರಿತ ಡಿಸ್ಪ್ಲೇ ಕಾರ್ಡ್ ವಿತರಣೆ

ಮೈಸೂರು: ಮೈಸೂರು ನಗರ ವ್ಯಾಪ್ತಿಯಲ್ಲಿ ವಾಸಿಸುವ ಆಟೋ ರಿಕ್ಷಾ ಚಾಲಕರುಗಳಿಗೆ ಚಾಲಕರ ವಿವರವನ್ನೊಳಗೊಂಡ ಕ್ಯೂ ಆರ್ ಕೋಡ್ ಆಧಾರಿತ ಡಿಸ್ಪ್ಲೇ ಕಾರ್ಡ್  ವಿತರಿಸಲಾಯಿತು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಕಛೇರಿಯಲ್ಲಿ ಆಟೋ ರಿಕ್ಷಾ ಚಾಲಕರಿಗೆ ಸಾಂಕೇತಿಕವಾಗಿ ಡಿಸ್ಪ್ಲೇ ಕಾರ್ಡ್ ವಿತರಿಸಿದರು.

ದೇವರಾಜ ಪೊಲೀಸ್ ಠಾಣೆ, ಲಷ್ಕರ್ ಪೊಲೀಸ್ ಠಾಣೆ ಸೇರಿದಂತೆ ನಗರ ವ್ಯಾಪ್ತಿಯ ಎಲ್ಲಾ ಠಾಣೆಗಳಲ್ಲೂ  ಡಿಸ್ಪ್ಲೇ ಕಾರ್ಡ್ ವಿತರಿಸಲಾಗುತ್ತಿದೆ

ದಾಖಲಾತಿಗಳನ್ನು ಪರಿಶೀಲಿಸಿ ಆಟೋ ಚಾಲಕರುಗಳಿಗೆ ಡಿಸ್ಪ್ಲೇ ಕಾರ್ಡ್ ನ್ನು ವಿತರಿಸಲಾಗುತ್ತಿದೆ.

ಮೇ.31ರೊಳಗೆ ಆಟೋ ಚಾಲಕರುಗಳು ಕಡ್ಡಾಯವಾಗಿ ಕ್ಯೂ ಆರ್ ಕೋಡ್ ಆಧಾರಿತ ಡಿಸ್ಪ್ಲೇ ಕಾರ್ಡ್ ಪಡೆದು ತಮ್ಮ ಆಟೋ ರಿಕ್ಷಾಗಳಲ್ಲಿ ಪ್ರದರ್ಶಿಸಬೇಕು ಎಂದು ಈ ವೇಳೆ ಆಯುಕ್ತರು ತಿಳಿಸಿದರು. ಜೂನ್ ಒಂದರಿಂದ ಕ್ಯೂ ಆರ್ ಕೋಡ್ ಆಧಾರಿತ ಡಿಸ್ಪ್ಲೇ ಕಾರ್ಡ್ ಇಲ್ಲದೇ ಸಂಚರಿಸುವ ಆಟೋ ಚಾಲಕರ ವಿರುದ್ಧ  ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.