ಬೆಂಗಳೂರು: ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಗುತ್ತಿಗೆದಾರರ ಬಾಕಿ ಪಾವತಿಯಲ್ಲಿ ಹಗರಣ, ಶೇ.40ರಷ್ಟು ಕಮಿಷನ್ ದಂಧೆ, ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಅನುದಾನದಲ್ಲಿ ಕಮಿಷನ್, ಪಿಎಸ್‍ಐ ನೇಮಕಾತಿಯಲ್ಲಿ ಹಗರಣ ಈಗ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಹಗರಣವಾಗಿದೆ. ಸರ್ಕಾರ ಸರಣಿ ಹಗರಣಗಳಲ್ಲಿ ಸಿಲುಕಿದೆ.ಶಿಕ್ಷಣ ವ್ಯವಸ್ಥೆ ಭ್ರಷ್ಟವಾಗಿರಲಿಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬಾಧಿತವಾಗಿರುವ ಅಭ್ಯರ್ಥಿಗಳ ಜೊತೆ ನಾವು ನಿಲ್ಲುತ್ತೇವೆ. ಅವರ ಪ್ರತಿಭಟನೆಗೆ ಕೈ ಜೋಡಿಸಲಿದ್ದೇವೆ ಎಂದು ಕಾಂಗ್ರೆಸ್ ತಿಳಿಸಿದೆ.

