ಚೆನ್ನೈ: ದೇವಸ್ಥಾನದ ಉತ್ಸವದ ವೇಳೆ ರಥಕ್ಕೆ ಹೈ ಟೆನ್ಷನ್ ವೈರ್ ಸುತ್ತಿಕೊಂಡು ವಿದ್ಯುತ್ ಪ್ರವಹಿಸಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾಳಿಮೇಡು ಪಟ್ಟಣದಲ್ಲಿ ಅಯ್ಯಪ್ಪನ ಉತ್ಸವ ಆಚರಿಸಲಾಗುತಿತ್ತು. ಭಕ್ತರು ದೇವಸ್ಥಾನದ ರಥವನ್ನು ಬೀದಿಗಳಲ್ಲಿ ಎಳೆಯುತ್ತಿದ್ದ ವೇಳೆ ರಥವನ್ನು ತಿರುಗಿಸುತ್ತಿದ್ದಾಗ ವಿದ್ಯುತ್ ತಂತಿ ರಥಕ್ಕೆ ಸಿಲುಕಿಕೊಂಡು ವಿದ್ಯುತ್ ಪ್ರವಹಿಸಿದೆ.
ಒಟ್ಟು 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 15 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೃತರಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಆರ್ಥಿಕ ನೆರವು ಘೋಷಿಸಿದ್ದಾರೆ.

