ವಿದೇಶಿ ವಸ್ತುಗಳಿಗೆ ಮಾರು ಹೋಗಬೇಡಿ –ಪ್ರಧಾನಿ ಮೋದಿ

ಪುಣೆ: ನಾವು‌ಭಾರತೀಯರು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದ್ದೇವೆ ಈಗಲಾದರೂ ವಿದೇಶಿ ವಸ್ತುಗಳಿಗೆ ಮಾರು ಹೋಗುವುದನ್ನು ಕಡಿಮೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್‍ನ ಜಿಐಟಿಒ ಕನೆಕ್ಟ್ 2022 ವ್ಯಾಪಾರ ಶೃಂಗ ಸಭೆಯನ್ನು ವಿಡಿಯೋ ಕಾನರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮೋದಿ, ಸ್ಥಳೀಯ ಸ್ವಾವಲಂಬನೆಗಾಗಿ ಧ್ವನಿ (ವೋಕಲ್ ಫಾರ್ ಲೋಕಲ್) ಮಂತ್ರ ಪಾಲನೆ ಮಾಡಬೇಕು. ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ದೇಶಿಯ ಪ್ರತಿಭೆ, ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಬೆಂಬಲಿಸುತ್ತಿದೆ. ಪ್ರತಿದಿನ ಹತ್ತಾರು ನವೋದ್ಯಮಗಳು ನೋಂದಾಯಿಸುತ್ತಿದೆ.

ಬೃಹತ್ ಬಂಡವಾಳ ತೊಡಗಿಸುವ ಯುನಿಕಾರ್ನ್ ಗಳು ಪ್ರತಿ ವಾರ ಆರಂಭಗೊಳ್ಳುತ್ತಿವೆ. ಸ್ವಾವಲಂಬಿ ಭಾರತ ನಮ್ಮ ಮಾರ್ಗ ಮತ್ತು ನಮ್ಮ ಸಂಕಲ್ಪವಾಗಿದೆ ಎಂದು ಪ್ರಧಾನಿ ಹೇಳಿದರು.

ದೂರದ ಹಳ್ಳಿಗಳ ಜನರು, ಸಣ್ಣ ಅಂಗಡಿಕಾರರು ಮತ್ತು ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ.

ಇದಕ್ಕಾಗಿ ಆರಂಭಿಸಲಾಗಿರುವ ಜಿಇಎಂ ವೆಬ್‍ಸೈಟ್‍ನಲ್ಲಿ 40 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದರು.