ಬೆಂಗಳೂರು: ಆಜಾನ್ ಆಯ್ತು ಈಗ ಮತ್ತೊಂದು ಅಭಿಯಾನವನ್ನು ಪ್ರಾರಂಭಿಸಲು ಹಿಂದೂಪರ ಸಂಘಟನೆಗಳು
ಮುಂದಾಗಿವೆ.
ಇನ್ನು ಮುಂದೆ ರಾಜ್ಯದ ಎಲ್ಲಾ ಮದರಸಗಳಲ್ಲಿ ರಾಷ್ಟ್ರಗೀತೆ ಹಾಡಬೇಕು ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್,ರಾಜ್ಯದಲ್ಲಿರುವ ಮದರಸಾಗಳು ಭಯೋತ್ಪಾದಕರನ್ನು ಹುಟ್ಟುಹಾಕುವ ಕಾರ್ಖಾನೆಗಳಾಗಿವೆ ಎಂದು ಗಂಭೀರ ಆರೋಪ ಮಾಡಿದರು.
ಮದರಸಾಗಳು ಸರ್ಕಾರದ ಅನುದಾನ ಪಟೆಯುತ್ತವೆ.ಆದರೆ ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮದರಸಾಗಳಲ್ಲಿ ಕುರಾನ್ ಮಾತ್ರ ಬೋದಿಸುವುದಿಲ್ಲ,ಜತೆಗೆ ಭಯೋತ್ಪಾದನೆ ಮಾಡುವುದು ಹೇಗೆಂದು ತಯಾರಿ ಮಾಡಲಾಗುತ್ತದೆ.
ಅಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸುವುದಲ್ಲದೆ ಅವುಗಳ ಬಳಕೆಯನ್ನು ಹೇಳಿಕೊಡಲಾಗುತ್ತದೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಅನುದಾನ ಪಡೆಯುವ ಎಲ್ಲಾ ಮದರಸಗಳಲ್ಲಿ ಇನ್ನು ಮುಂದೆ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಬೇಕು ಎಂದು ಸರ್ಕಾರ ವನ್ನು ಅವರು ಆಗ್ರಹಿಸಿದರು.
ಭಯೋತ್ಪಾದಕ ಕರುಹು ಕಂಡುಬಂದಲ್ಲಿ ಅಂತಹ ಮದರಸಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು,ಅಲ್ಲಿ ಆಯುಧಗಳನ್ನು ಸೀಸ್ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.
ಇಲ್ಲದಿದ್ದರೆ ಶ್ರೀ ರಾಮಸೇನೆ ವತಿಯಿಂದ ಬೃಹತ್ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

