ಮಂಡ್ಯ- ಸಕ್ಕರೆ ನಾಡು ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಜಾಮೀಯಾ ಮಸೀದಿ ಬಗ್ಗೆ ಸಮೀಕ್ಷೆ ಮಾಡಿ ಹಿಂದೂಗಳಿಗೆ ಒಪ್ಪಿಸಬೇಕೆಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ.
ಕಾಶಿಯ ಜ್ಞಾನವಾಪಿ ಮಸೀದಿಯನ್ನು ಸಮೀಕ್ಷೆ ಮಾಡಿ ವರದಿ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದೆ ಅದರಂತೆ
ಜಾಮಿಯಾ ಮಸೀದಿಯಲ್ಲೂ ಸಮೀಕ್ಷೆ ನಡೆಯಬೇಕು ಎಂದು ಕೆಲ ಸಂಘಟನೆಗಳು ಆಗ್ರಹಿಸಿವೆ.
ಈ ಸಂಬಂಧ ನರೇಂದ್ರ ಮೋದಿ ವಿಚಾರ ಮಂಚ್ ಸದಸ್ಯರು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಮನವಿ ಸಲ್ಲಿಸಿ ಆಗ್ರಹ ಮಾಡಿದ್ದಾರೆ.
ಶ್ರೀರಂಗಪಟ್ಟಣದ ಈಗಿರುವ ಜಾಮೀಯಾ ಮಸೀದಿಯಲ್ಲಿ ಈ ಮೊದಲು ಮೂಡಲಬಾಗಿಲು ಕಡೆ ಆಂಜನೇಯಸ್ವಾಮಿ ದೇವಸ್ಥಾನವಿತ್ತು.
1784 ರಲ್ಲಿ ಟಿಪ್ಪು ಸುಲ್ತಾನ್ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನೆಲಸಮ ಮಾಡಿ ಅಲ್ಲಿ ಜಾಮೀಯಾ ಮಸೀದಿ ನಿರ್ಮಾಣ ಮಾಡಿದ್ದಾರೆ.
ಇದಕ್ಕೆ ಆಧಾರ ಪುಷ್ಠೀಕರಿಸುವಂತೆ ಲೂಯಿಸ್ ರೈಸ್ ಬರೆದಿರುವ ಮೈಸೂರು ಗೆಜೆಟ್ ಇದೆ ಎಂದು ಸಂಘಟನೆಯವರು ಹೇಳಿದ್ದಾರೆ.
ಅಲ್ಲದೆ ಮಸೀದಿಯ ಅಕ್ಕ ಪಕ್ಕದಲ್ಲಿ ದೇವಸ್ಥಾನದ ಸನಿಹಹದಲ್ಲಿರುವಂತೆ ಬಾವಿಗಳು ಹಾಗೂ ಕಲ್ಯಾಣಿ ಇದೆ. ಜೊತೆಗೆ ದೇವಸ್ಥಾನದ ಕಂಬಗಳ ಮೇಲೆ ಹಿಂದೂ ದೇವರ ಮೂರ್ತಿ ಕೆತ್ತನೆಗಳಿವೆ.
ಪರ್ಷಿಯಾದ ಖಲೀಫನಿಗೆ ಸ್ವತಃ ಟಿಪ್ಪು ಸುಲ್ತಾನ್ ಬರೆದಿರುವ ಪತ್ರದಲ್ಲಿ ಹಿಂದೂ ದೇವಸ್ಥಾನ ಕೆಡವಿ ಜಾಮೀಯಾ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾನೆ.
ಈ ಪುರಾವೆಯನ್ನಿಟ್ಟುಕೊಂಡು ಜಾಮೀಯಾ ಮಸೀದಿ ಬಗ್ಗೆಯೂ ಸಮೀಕ್ಷೆ ನಡೆಸಬೇಕು ಹಾಗೂ ಜಾಮೀಯಾ ಮಸೀದಿಯನ್ನು ಹಿಂದೂಗಳಿಗೆ ನೀಡಬೇಕೆಂದು ನರೇಂದ್ರ ಮೋದಿ ವಿಚಾರ ಮಂಚ್ ನ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

