ಮಂಡ್ಯ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇನಾದರೂ ಬಂದುಬಿಟ್ಟರೆ ರಾಜ್ಯದಲ್ಲಿ ತಾಲಿಬಾನ್ ಆಢಳಿತ ಪ್ರಾರಂಭವಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ವಾಡಿದರು.
ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ನಲ್ಲಿ ಎರಡು ಟೀಮ್ ಗಳಿವೆ,ಒಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಟೀಮ್ ಇದಕ್ಕೆ ಬೆಂಗಳೂರಿನ ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವೈಸ್ ಕ್ಯಾಪ್ಟನ್.
ಇನ್ನೊಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಮ್.ಇದಕ್ಕೆ ಶಾಸಕ ಹ್ಯಾರೀಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವೈಸ್ ಕ್ಯಾಪ್ಟನ್ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ಕಾಂಗ್ರೆಸ್ ನವರು ಕೇವಲ ಮುಸ್ಲಿಮರ ಓಲೈಕೆ ಕೆಲಸ ಮಾಡುತ್ತಾರೆ.ಅವರಿಗೆ ಹಿಂದೂಗಳ ಬಗ್ಗೆ ಒಲವಿಲ್ಲ ಎಂದು ದೂರಿದರು.
ಹಿಂದೂಗಳ ರಕ್ಷಣೆಗೆ ಆಪಕ್ಷದಲ್ಲಿ ಯಾರೂ ಮುಂದಾಗುವುದಿಲ್ಲ,ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ಟರೆ ಖಂಡಿತಾ ರಾಜ್ಯದಲ್ಲಿ ಆಡಳಿತ ಬರುತ್ತದೆ.ಆದ್ದರಿಂದ ಜನತೆ ಈಗಿನಿಂದಲೇ ಎಚ್ಚೆತ್ತಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಕರೆ ನೀಡಿದರು.
ಜನತೆ ಬಿಜೆಪಿ ಯನ್ನು ಬೆಂಬಲಿಸಬೇಕು ಆಗ ಮಾತ್ರ ಹಿಂದುಗಳು ಸುರಕ್ಷಿತವಾಗಿ ಬದುಕಲು ಸಾದ್ಯ ಎಂದು ಹೇಳಿದರು.

