ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: 145 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಬೆಂಗಳೂರು: 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಪಡೆದಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಪ್ರಕಟಿಸಿದರು.

10 ವರ್ಷದಲ್ಲೇ ಈ ಬಾರಿ ದಾಖಲೆಯ ಫಲಿತಾಂಶ ಬಂದಿದೆ. ಬೆಂಗಳೂರಿನ ಅನಘಂ ಎಂ. ಮೂರ್ತಿ, ಬಳ್ಳಾರಿಯ ಸಿ.ಎಸ್. ಕವನ, ದೇವನಹಳ್ಳಿಯ ಚೈತನ್ಯ, ಹಾಸನದ ಅರ್ಜುನ್, ಸಿರಸಿಯ ಚಿರಾಗ್,  ಆಕೃತಿ   ಸೇರಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ.

624 ಅಂಕಗಳನ್ನು 309 ವಿದ್ಯಾರ್ಥಿಗಳು,  623 ಅಂಕಗಳನ್ನು 422 ವಿದ್ಯಾರ್ಥಿಗಳು, 622 ಅಂಕಗಳನ್ನು 615 ವಿದ್ಯಾರ್ಥಿಗಳು, 621 ಅಂಕಗಳನ್ನು 706 ವಿದ್ಯಾರ್ಥಿಗಳು, 620 ಅಂಕವನ್ನು 704 ವಿದ್ಯಾರ್ಥಿಗಳು ಗಳಿಸಿದ್ದಾರೆ.

40061 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ನಿಂದ ಪಾಸ್ ಆಗಿದ್ದು,   ಸರ್ಕಾರಿ ಶಾಲೆಗಳಲ್ಲಿ ಶೇ.88 ಅನುದಾನಿತ ಶಾಲೆಗಳಲ್ಲಿ 87.84 ಫಲಿತಾಂಶ ಬಂದಿದೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ಈ ಬಾರಿ ಯಾವ ಜಿಲ್ಲೆ ಮೊದಲು ಯಾವ ಜಿಲ್ಲೆ ಲಾಸ್ಟ್ ಎನ್ನುವ ವಿಂಗಡಣೆ ಮಾಡಲಾಗಿಲ್ಲ. ಶಾಲೆಗಳಿಗೆ ಗ್ರೇಡ್ ವೈಸ್ ಫಲಿತಾಂಶದ ವಿವರವನ್ನು ನೀಡಲಾಗಿದೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಫಲಿತಾಂಶ ಘೋಷಣೆಯಾದ ನಂತರ, karresults.nic.in ಮತ್ತು sslc.karnataka.gov.in ಜಾಲತಾಣಕ್ಕೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದು.