ನಾನು ತಪ್ಪುಮಾಡಿದ್ದರೇ ದೇವರು ಶಿಕ್ಷೆ ನೀಡಲಿ -ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಬಾಗಲಕೋಟೆ: ನಾನು ತಪ್ಪುಮಾಡಿದ್ದರೇ ದೇವರು ಶಿಕ್ಷೆ ನೀಡಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಬಾಗಲಕೋಟೆಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ಕಳಂಕ ಇಲ್ಲದೇ ಹೊರಬರುವುದಾಗಿ ಅವರು ತಿಳಿಸಿದರು.

ನಾನು ತಪ್ಪುಮಾಡಿದ್ದರೇ ದೇವರು ಶಿಕ್ಷೆ ನೀಡಲಿ. 15 ದಿನಗಳಲ್ಲಿ ಎಲ್ಲವೂ ತಿಳಿಯಲಿದೆ. ಯಾವುದೇ ಕಳಂಕ ಇಲ್ಲದೇ ಹೊರಬರುತ್ತೇನೆ. ನನ್ನನ್ನು ಸಂಪುಟಕ್ಕೆ ಸೇರಿಸೋದು ಹೈಕಮಾಂಡ್ ನಿರ್ಧಾರ ಎಂದು ಈಶ್ವರಪ್ಪ ಹೇಳಿದರು.

ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ನಾವು ಸೀಟಿಗಾಗಿ ಬಡಿದಾಡಲ್ಲ. ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದವರು ಹೇಳಿದರು.

ಹೆಡ್ಗೆವಾರ್ ಬಗ್ಗೆ ಪಠ್ಯ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಪಠ್ಯದಲ್ಲಿ ಹೆಡ್ಗೆವಾರ್ ಭಾಷಣದ ಒಂದು ಅಂಶ ಸೇರಿಸಲಾಗಿದೆ. ಮಹಮದ್ ಆಲಿ ಜಿನ್ನಾ, ಶಿವಲಿಂಗ ಒಡೆದ ಔರಂಗಜೇಬ್ ನ ಹೆಸರು ಸೇರಿಸಬೇಕಿತ್ತಾ? ದೇಶ ಹಾಳು ಮಾಡಿದವರನ್ನ ವೈಭವೀಕರಿಸಲಾಗಿದೆ ಎಂದವರು ತಿಳಿಸಿದರು.