ಶ್ರೀನಗರ: ಕಿರಿತೆರೆ ನಟಿ ಅಮ್ರಿನ್ ಭಟ್ ರನ್ನು ಕೊಲೆಗೈದಿದ್ದ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆಗೈದಿದೆ.
ಶ್ರೀನಗರದ ಸೌರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಉಗ್ರರನ್ನು ಹತ್ಯೆ ಮಾಡಲಾಗಿದೆ.
ಹತ್ಯೆಯಾದ ಎಲ್‍ಇಟಿ ಉಗ್ರರನ್ನು ಶಾಕಿರ್ ಅಹ್ಮದ್ ವಾಜಾ ಮತ್ತು ಅಫ್ರೀನ್ ಅಫ್ತಾಬ್ ಮಲಿಕ್ ಎಂದು ಗುರುತಿಸಲಾಗಿದೆ.
ಈ ಉಗ್ರರು ಕಿರುತೆರೆ ನಟಿ ಅಮ್ರಿನ್ ಭಟ್ ರ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯಾದ ಉಗ್ರರು ಬದ್ಗಾಮ್ ಜಿಲ್ಲೆಯಲ್ಲಿ ಬುಧವಾರ 35 ವರ್ಷದ ಟಿಕ್‍ಟಾಕ್ ಸ್ಟಾರ್ ಅಮ್ರೀನ್ ಭಟ್‍ಳನ್ನು ಹತ್ಯೆ ಮಾಡಿದ್ದರು.
ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 3 ದಿನಗಳಲ್ಲಿ ಒಟ್ಟು 10 ಉಗ್ರರು, 7 ಎಲ್‍ಇಟಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

