ಇತಿಹಾಸವನ್ನು ಇತಿಹಾಸವಾಗಿಯೇ ಭೋದಿಸಿ – ಯದುವೀರ ಒಡೆಯರ್

ಮೈಸೂರು: ಇತಿಹಾಸವನ್ನು ಇತಿಹಾಸವಾಗಿಯೇ ಭೋದಿಸಿ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.

ಮೈಸೂರಲ್ಲಿ ಮಂಗಳವಾರ ಒಡೆಯರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಕ್ಕಳಿಗೆ ಸರಿಯಾದ ಇತಿಹಾಸ ಹೇಳಿಕೊಡಬೇಕು. ಇತಿಹಾಸವನ್ನು ತಿದ್ದಬಾರದು. ಮಕ್ಕಳಿಗೆ ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯ ಅಳವಡಿಸಬೇಕು ಎಂದು ಯದುವೀರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಾರಂಪರಿಕ ಕಟ್ಟಡಗಳ ಉಳಿವಿಗೆ ಟೆಂಡರ್ ಪ್ರಕ್ರಿಯೆ ಬದಲಾಗಬೇಕು ಎಂದು ಹೇಳಿದ ಅವರು ಈಗಿರುವ ಟೆಂಡರ್ ಪ್ರಕ್ರಿಯೆ ಪ್ರಕಾರ, ಕಟ್ಟಡವನ್ನು ನೆಲಸಮ ಮಾಡುವುದು ಮತ್ತು ಮರು ನಿರ್ಮಾಣ ಮಾಡುವುದು ಅಂತ ಮಾತ್ರ ಇದೆ ಎಂದರು.

ಪಾರಂಪರಿಕ ಕಟ್ಟಡಗಳನ್ನು ಪುನಶ್ಚೇತನಗೊಳಿಸಲು ಅವಕಾಶ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನಶ್ವೇತನಕ್ಕೆ ಅನುಮತಿ ಸಿಗುತ್ತಿಲ್ಲ. ಅದು ಕೂಡ ಸರಿಯಾಗಬೇಕು ಎಂದು ಹೇಳಿದರು.

ಮೈಸೂರಿನ ಆಯುರ್ವೇದಿಕ್ ಆಸ್ಪತ್ರೆ ಚೆನ್ನಾಗಿ ಪುನಶ್ಚೇತನವಾಗಿದೆ. ಕೇವಲ ಸ್ಮಾಕರವಾಗಿಲ್ಲ, ಜನರಿಗೆ ಬಳಕೆ ಆಗುತ್ತಿದೆ.

ಪಾರಂಪರಿಕ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಕಟ್ಟಡ ಮಾದರಿ ಆಗಬೇಕು ಎಂದು ಯದುವೀರ್ ತಿಳಿಸಿದರು.