ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಲಾಗಿದೆ.
ತಾಲಿಬ್ ಹುಸೇನ್ (38)ಬಂಧಿತನಾಗಿರುವ ಶಂಕಿತ ಉಗ್ರ.
ಈ ಶಂಕಿತ ಉಗ್ರನನ್ನು ಜಮ್ಮು ಮತ್ತುಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ.
ಈ ಶಂಕಿತ ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಿಸಿಕೊಂಡು ಓಡಾಡುತ್ತಿದ್ದ.
ತಾಲಿಬ್ ಎಂದು ಹೆಸರು ಬದಲಿಸಿ ಕೊಂಡಿದ್ದ ಈತ ಬೆಂಗಳೂರಿನ ಓಕಳಿಪುರಂ ಮಸೀದಿ ಬಳಿ ವಾಸವಿದ್ದ.
ಈತ ಬಿಎನ್ಎಲ್ ಏರ್ ಸರ್ವಿಸ್ನಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ನೆಲಸಿದ್ದನು.
ಕಳೆದ 8 ವರ್ಷದಿಂದ ವಾಸವಿದ್ದ ಶಂಕಿತ ಉಗ್ರ ತಾಲಿಬ್ ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಎನ್ನಲಾಗಿದೆ.
ಶಂಕಿತ ಉಗ್ರ ತಾಲಿಬ್ ನನ್ನು ಪೊಲೀಸರು ಬಂಧಿಸಿ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಈತನಿಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಬಂಧ ಇತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಸೀದಿ ಅಧ್ಯಕ್ಷ ಅನ್ವರ್ ಮಾವಾಡ ಮಾತನಾಡಿ, ತಾಲಿಬ್ ಹುಸೇನ್ ಕಳೆದ ಹತ್ತು ವರ್ಷಗಳಿಂದ ರೈಲ್ವೆ ಸ್ಟೇಷನ್‍ನಲ್ಲಿ ಕೊರಿಯರ್ ಕೆಲಸ ಮಾಡುತ್ತಿದ್ದ. ಆದರೆ ಕೊರೊನಾ ಬಂದ ನಂತರ ಕೆಲಸ ಹೋಗಿತ್ತು. ನಂತರ ಯಾವುದೇ ಕೆಲಸ ಇರಲಿಲ್ಲ, ಮಗು ಕೂಡ ಇತ್ತು. ಹಾಗಾಗಿ ಮಾನವೀಯತೆ ಆಧಾರದ ಮೇಲೆ ಮಸೀದಿ ಬಳಿ ಆಸರೆ ಕೊಟ್ಟಿದ್ದೆವು ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಪೊಲೀಸರು, ಕಳೆದ ಒಂದು ವಾರದ ಹಿಂದೆ ಬಂದು ಪರಿಶೀಲನೆ ನಡೆಸಿ ತಾಲಿಬ್ ಹುಸೇನ್‍ನನ್ನು ಕರೆದುಕೊಂಡು ಹೋಗಿದ್ದಾರೆ.
ಪೊಲೀಸರು ಬಂದ ಬಳಿಕ ಆತ ಕಾಶ್ಮೀರದ ಕಾಲಕೋಟ್ ಮೂಲದವನು ಎಂದು ಗೊತ್ತಾಯಿತು. ಅವನು ಯಾವ ಸಂಘಟನೆಗೆ ಸೇರಿವವನು ಎನ್ನುವ ಬಗ್ಗೆ ಮಾಹಿತಿ ಇಲ್ಲ. ತುಂಬಾ ಒಳ್ಳೆಯ ವ್ಯಕ್ತಿ. ಯಾವತ್ತು ಯಾವುದೇ ಗಲಾಟೆ ಮಾಡಿಕೊಂಡವನಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಕಾಶ್ಮೀರದಲ್ಲಿ ಒಂದು ಮದುವೆ ಆಗಿದ್ದ ತಾಲೀಬ್ ಹುಸೇನ್‍ನ ಮೊದಲ ಹೆಂಡತಿಗೆ ಮೂರು ಮಕ್ಕಳಿದ್ದಾರೆ.
ಪತ್ನಿ ಸಾವನ್ನಪ್ಪಿದ ನಂತರ ಮಕ್ಕಳನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದ ಈತ ಇಲ್ಲೇ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ.
ಈ ವೇಳೆ ಇಬ್ಬರು ಮಕ್ಕಳಿರುವ ಮಹಿಳೆಯನ್ನು ಮದುವೆ ಆಗಿದ್ದ ಎಂದು ಹೇಳಲಾಗುತ್ತಿದೆ

