ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರ ಪ್ರತಿಭಟನೆ

ಮೈಸೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ನಯ್ಯ ಲಾಲ್ ಬರ್ಬರ ಹತ್ಯೆ ಖಂಡಿಸಿ ಶುಕ್ರವಾರ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಷಯ. ನಾವೆಲ್ಲಿದ್ದೇವೆ ಭಾರತದಲ್ಲಾ ಅಥವಾ ಆಫ್ಘಾನಿಸ್ತಾನದಲ್ಲ ಎಂಬ ಭಾವನೆ ಬರುತ್ತಿದೆ ಎಂದು ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜಸ್ ಲೋಕೇಶ್‌ಗೌಡ ತಿಳಿಸಿದರು.

ಉದಯಪುರದಲ್ಲಿ ನಡೆದ ಈ ಭೀಕರ ಘಟನೆ ನಮ್ಮ ದೇಶದ ನಾಗರಿಕರನ್ನು ಬೆಚ್ಚಿ ಬೆಳೆಸಿದೆ.  ಯಾವುದೇ ಸುಸಂಸ್ಕೃತ ಸಮಾಜದಲ್ಲಿ ನಡೆಯಬಾರದ ಘನ ಘೋರ ಕೃತ್ಯ ಇದು.ಇಡೀ ಸಮುದಾಯವೇ ತಲೆ ತಗ್ಗಿಸುವ ವಿಚಾರವಾಗಿದೆ ಎಂದು ಹೇಳಿದರು.

ಯಾವ ಧರ್ಮವು ಈ ರೀತಿಯ ಹೇಯ ಘಟನೆಯನ್ನು ಒಪ್ಪುವುದಿಲ್ಲ. ಇದನ್ನು ಇಡೀ ಭಾರತವೇ ಪಕ್ಷಾತೀತವಾಗಿ ಖಂಡಿಸಲೇಬೇಕು ಎಂದು ಕರೆ ನೀಡಿದರು.

ಸಾಕ್ಷ್ಯಾಧಾರ ಗಳಿದ್ದರೂ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು, ರಾಜಸ್ಥಾನ ಸರ್ಕಾರ ಇನ್ನೂ ಯಾಕೆ ಮೀನ- ಮೇಷ ಎಣಿಸುತ್ತಿದೆ, ಆರೋಪಿಗಳೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿರುವಾಗ ರಾಜಸ್ಥಾನ ಸರ್ಕಾರ  ಕೂಡಲೇ ಪಾಪಿಗಳಿಗೆ ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು  ಎಂದು ಒತ್ತಾಯಿಸಿದರು.

ನಮ್ಮ ಮನವಿಯನ್ನು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ  ಸಲ್ಲಿಸುತ್ತಿದ್ದೇವೆ ಎಂದು ತೇಜೇಶ್ ಲೋಕೇಶ್ ಗೌಡ ತಿಳಿಸಿದರು.

ಡಾ. ಶಾಂತರಾಜೇಅರಸ್, ಕೃಷ್ಣಯ್ಯ ಸಿಹೆಚ್, ವಿಜಯೇಂದ್ರ, ಪ್ರಭುಶಂಕರ, ಪ್ರಜೀಶ್ ಪಿ, ಡಾ.ಮೊಗಣ್ಣಾಚಾರ್, ಡಾ. ನರಸಿಂಹೇಗೌಡ, ಮಧುವನ ಚಂದ್ರು, ಚಂದ್ರಶೇಖರ್ ಎಂ ಎಸ್, ನಾಗಣ್ಣ,ಅಂಬಾ ಅರಸ್, ಅನಿತಾಚೇತನ್, ಇಂದಿರಾ, ಚಂದನ ನಂದೀಶ್ ಬಸವರಾಜು, ಜ್ಯೋತಿ ಮತ್ತಿತರರು ಪಾಲ್ಗೊಂಡಿದ್ದರು.