ಮೈಸೂರು: ದೇವರ ಕೋಣೆಯಲ್ಲಿ ಅಳವಡಿಸಲಾದ ಫೋಟೋ ಬಳಿ ತೋಳ ಹಾವೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮೈಸೂರಿನ ರಾಮಕೃಷ್ಣ ನಗರದ ನಿಮಿಷಾಂಬ ಬಡಾವಣೆಯಲ್ಲಿ ನಡೆದಿದೆ.
ನಿಮಿಷಾಂಬಾ ಬಡಾವಣೆಯ ಮೊದಲನೇ ಅಡ್ಡರಸ್ತೆಯಲ್ಲಿರುವ ಅಜಯ್ ಕುಮಾರ್ ಅವರ ನಿವಾಸದಲ್ಲಿ ಶುಕ್ರವಾರ ಪೂಜೆ ಮುಗಿಸಿದ ಕೆಲ ಗಂಟೆಗಳಲ್ಲೇ ತೋಳ ಹಾವು ಕಾಣಿಸಿಕೊಂಡಿದೆ ಇದರಿಂದ ಮನೆಯವರು ಗಾಬರಿಗೊಂಡರು.
ಕೂಡಲೇ ಮೈಸೂರಿನ ಉರಗ ರಕ್ಷಕ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿ ಮನೆ ಮಾಲೀಕರು ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ರಮೇಶ್ ಅವರು ಹಾವನ್ನು ಹಿಡಿದು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ನಂತರ ಮನೆಯವರು ನೆಮ್ಮದಿಯ ಉಸಿರು ಬಿಟ್ಟರು.

