ಮೈಸೂರು: ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಗಳ ಬುನಾದಿ ತರಬೇತಿಯಲ್ಲಿ ಅತ್ಯುತ್ತಮ ಪರೀಕ್ಷಾರ್ಥಿಯಾಗಿ ಹೊರಹೊಮ್ಮಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜ್ಯೋತಿ ನಗರದ ಪೊಲೀಸ್ ತರಬೇತಿ ಶಾಲೆಯಲ್ಲಿ 7ನೇ ತಂಡದ ಮಹಿಳಾ ಪೊಲೀಸ್ ಕಾನ್ಸಟೇಬಲ್ ಗಳ ಬುನಾದಿ ತರಬೇತಿಯಲ್ಲಿ 116 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ.
ಶನಿವಾರ ಪ್ರಶಿಕ್ಷಣಾರ್ಥಿಗಳ ತಂಡವು ನಿರ್ಗಮನ ಪಥಸಂಚಲನವನ್ನು ಪ್ರದರ್ಶಿಸಿತು.
ಪೊಲೀಸ್ ಮಹಾನಿರ್ದೇಶಕರಾದ ಡಾ.ಪಿ.ರವೀಂದ್ರನಾಥ ಗೌರವ ವಂದನೆ ಸ್ವೀಕರಿಸಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಪ್ರಿಯಾಂಕ ಆರ್, ಒಳಾಂಗಣ ಪ್ರಶಸ್ತಿಯಲ್ಲೂ ಪ್ರಥಮ ಸ್ಥಾನ ಪ್ರಿಯಾಂಕ ಆರ್ ಗೆ ಲಭಿಸಿದೆ.
ದ್ವಿತೀಯ ಸ್ಥಾನ ಸೌಜನ್ಯ ಹೆಚ್.ಎನ್, ತೃತೀಯ ಸ್ಥಾನ ಪ್ರೇಮ ಉದಯ್ ನಾಯಕ.
ಹೊರಾಂಗಣದಲ್ಲಿ ಪ್ರಥಮ ಸ್ಥಾನ ಶ್ರೀದೇವಿ, ದ್ವಿತೀಯ ಸ್ಥಾನ ದೀಪಾ ಈರಣ್ಣ ಕಂಬಾರ, ತೃತೀಯ ಸ್ಥಾನ ಪ್ರೇಮ.
ಫೈರಿಂಗ್ ನಲ್ಲಿ ಪ್ರಥಮ ಸ್ಥಾನ ಮಂಜುಳಾ ಡಿ, ದ್ವಿತೀಯ ಸ್ಥಾನ ಭಾರ್ಗವಿ ಎಂ.ಎನ್, ತೃತೀಯ ಸ್ಥಾನ ಅರ್ಚನ ಕೆ.ಎಸ್ ಇವರುಗಳಿಗೆ ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಶೇಖರ್ ಹೆಚ್.ಟಿ. ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

