ಮೈಸೂರು: ಸ್ವಚ್ಛನಗರಿ ಮೈಸೂರು ಪಾರಂಪರಿಕ ನಗರವಾಗಿ ಉಳಿಯಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಜನಸಾಮಾನ್ಯರೇ ನಿಷೇಧಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಮನವಿ ಮಾಡಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ವತಿಯಿಂದ ಮಂಡಿ ಮೊಹಲ್ಲಾದ ಚಿಕ್ಕ ಮಾರ್ಕೆಟ್ ಹಾಗೂ ಸುತ್ತಮುತ್ತಲ ಅಂಗಡಿಗಳಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳ ಬಗ್ಗೆ ಕರಪತ್ರ ಹಾಗೂ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು
ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ವಿಶ್ವಖ್ಯಾತಿ ಪಡೆದಿದೆ, ಕೋಟ್ಯಾಂತರ ಮಂದಿ ದೇಶವಿದೇಶದಿಂದ ಬರುತ್ತಾರೆ, ಇಂದಿಗೂ ಪಾರಂಪರಿಕತೆ ಹಸಿರು ಹೆಚ್ಚಿರುವ ಮೈಸೂರು ದೇಶದ ಸ್ವಚ್ಛನಗರಿ ಎಂಬ ಬಿರುದು ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಆದರೆ ಇಂದು ಪ್ಲಾಸ್ಟಿಕ್ ಬಳಕೆ ರಸ್ತೆಬದಿಯಿಂದ ಶಾಪಿಂಗ್ ಮಾಲ್ ವರೆಗೂ ಅವಲಂಬಿತವಾಗಿದೆ ಅದರಿಂದ ಮಾರಣಾಂತಿಕ ಕಾಯಿಲೆ ಬರುತ್ತದೆ ಎಂದು ತಿಳಿಸಿದರು.
ನಗರಪಾಲಿಕೆ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತ ಬಂದಿದ್ದೇವೆ, ಆದರೆ ಅದು ಜನಾಂದೋಲನದಿಂದ ಮಾತ್ರ ಸಾಧ್ಯ.
ಈ ಬಾರಿ ದಸರಾ ಆಚರಣೆಯನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂದು ಎಲ್ಲರೂ ಸಂಕಲ್ಪ ತೊಡೋಣ ಎಂದು ನಾಗರಾಜ್ ಹೇಳಿದರು.
ವ್ಯಾಪಾರಸ್ಥರು ಮತ್ತು ಗ್ರಾಹಕರು ಆರೋಗ್ಯವಂತ ಮೈಸೂರು ನಿರ್ಮಾಣದ ಕಡೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮೈಸೂರಿನಲ್ಲಿ ಪಾರಂಪರಿಕ ಕೆರೆಗಳು, ಉದ್ಯಾನವನಗಳು ದೊಡ್ಡಮರಗಳು ಕಾಣುತ್ತವೆ ಎಂದರೆ ಅದು ಮೈಸೂರು ರಾಜರ ಕೊಡುಗೆ.
ಪ್ಲಾಸ್ಟಿಕ್ ಬಳಕೆ ಮೇಲೆ ನಾವು ಅವಂಲಂಬಿತರಾದರೆ ಖಾಯಿಲೆಯನ್ನು ಉಚಿತವಾಗಿ ಪಡೆದಂತೆ ಹಾಗಾಗಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಮಾರಾಟ ನಿಲ್ಲಿಸಬೇಕು ಎಂದು ಅವರು ಕೋರಿದರು.
ಗ್ರಾಹಕರು ಮನೆಯಿಂದ ಬಟ್ಟೆ ಬ್ಯಾಗ್ ತಂದು ವ್ಯಾಪರಸ್ಥರಿಗೆ ಸಹಕರಿಸಬೇಕೆಂದು ಮನವಿ ಮಾಡಿದರು
ಮಂಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿಶ್ವನಾಥ್, ಆರೋಗ್ಯ ನಿರೀಕ್ಷಕ ಬಸವರಾಜು,ರಾಕೇಶ್ ಭಟ್,ಗಿರೀಶ್, ರವಿಶಂಕರ್,ವಿಕ್ರಂಅಯ್ಯಂಗಾರ್,ಸುಚೀಂದ್ರ ,ಸದಾಶಿವ,ಸುಬ್ರಹ್ಮಣ್ಯ ,ಕೇಬಲ್ ವಿಜಿ, ಕಿರಣ್ ,ಚಂದ್ರ ,ರಾಜು ಮತ್ತಿತರರು ಹಾಜರಿದ್ದರು.

