ಜ್ಞಾನವಾಪಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಅರ್ಜಿ ವಿಚಾರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್

ವಾರಣಾಸಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿಸಿದೆ.
ಜ್ಞಾನವಾಪಿ ಮಸೀದಿಯಲ್ಲಿ‌ ಪತ್ತೆಯಾಗಿರುವ ಶಿವಲಿಂಗ ಹಾಗೂ ಪಶ್ಚಿಮ ದ್ವಾರದ ಶೃಂಗಾರ ಗೌರಿ ಮಾತೆಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ರಾಖಿ ಸಿಂಗ್ ಸೇರಿದಂತೆ ಐವರು ಮಹಿಳೆಯರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ವಿಚಾರಣೆಗೆ ಈ ಅರ್ಜಿ ಅರ್ಹವಲ್ಲ ಎಂದು ಮಸೀದಿಯ‌ ಅಂಜುಮನ್ ಮುಸ್ಲಿಂ ಕಮಿಟಿ ಆಕ್ಷೇಪಣೆ ಸಲ್ಲಿಸಿತ್ತು.
ಈ ಬಗ್ಗೆ ವಾರಣಾಸಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವೇಶ್ ಅವರು ವಾದ ಪ್ರತಿವಾದ ಆಶಿಸಿದ್ದರು.
ಜ್ಞಾನವಾಪಿ ಮಸೀದಿಯ ‌ವಿಡಿಯೋಗ್ರಫಿ ಮಾಡಿಸಿ ನ್ಯಾಯಾಧೀಶರು ರಿಪೋರ್ಟ್ ತರಿಸಿಕೊಂಡು ಅದನ್ನು ಪರಿಶೀಲನೆ ನಡೆಸಿದ್ದರು.
ಅಂತಿಮವಾಗಿ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಲಾಗುವುದು, ವಿಚಾರಣೆಗೆ ಈ ಅರ್ಜಿ ಅರ್ಹ ಎಂದು ನ್ಯಾಯಾಧೀಶರಾದ ವಿಶ್ವೇಶ್ ಮಹತ್ವದ ತೀರ್ಪು ನೀಡಿದ್ದಾರೆ.
ಹಾಗಾಗಿ ಸೆಪ್ಟೆಂಬರ್ 22 ರಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಆದರೆ ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮಸೀದಿಯ ಮುಸ್ಲಿಂ ಕಮಿಟಿ ತಿಳಿಸಿದೆ.
ವಾರಣಾಸಿ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸುತ್ತಿದ್ದಂತೆ ಕಾಶಿಯಲ್ಲಿ ಹರ ಹರ ಮಹದೇವ ಎಂದು ಘೋಷಣೆ ಮೊಳಗಿಸಿ ಹಿಂದೂ ದರ್ಮಿಯರು ಸಂಭ್ರಮ ಪಟ್ಟರು.