ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ !

ಮೈಸೂರು: ಯಾವುದಾದರೂ ಗ್ರಾಮದಲ್ಲೋ ಅಥವಾ ರಾಜಕೀಯವಾಗಿ ಯಾರಿಗಾದರೂ ಆಗದವರು ವಾಮಾಚಾರ ಮಾಡಿಸಿದ್ದನ್ನ ಎಲ್ಲರೂ ಕೇಳಿರುತ್ತಾರೆ.

ಆದರೆ ಜನರಲ್ಲಿನ ಮೌಢ್ಯ ಹೋಗಲಾಡಿಸುವ ಪತ್ರಿಕೋದ್ಯಮದಲ್ಲೂ ಹೀಗೆ ನಡೆಯುತ್ತದೆ ಎಂದರೆ ನಂಬುತ್ತೀರಾ.

ಆದರೆ ಇದು ಖಂಡಿತಾ ಸತ್ಯ.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ  ವಾಮಾಚಾರ ನಡೆಸಲಾಗಿದ್ದು ಅಚ್ಚರಿ ಮೂಡಿಸಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ  ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದೆ.

ಕತ್ತರಿಸಿದ ಕೋಳಿ ತಲೆ, ಕಾಲುಕುಂಕುಮ, ಕೂದಲು, ಬಳೆಚೂರು ಜೊತೆಗೆ ಫೋಟೋವನ್ನು  ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಕೊಠಡಿಯಲ್ಲಿ ಹಾಕಲಾಗಿದೆ.

ಹಿಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಹೆಚ್ ಒಡಿ ತೇಜಸ್ವಿ ನವಿಲೂರು ಕಚೇರಿಯಲ್ಲಿ  ಇವೆಲ್ಲ ಕಂಡು ಬಂದಿದೆ.

ಆರು ತಿಂಗಳ ಹಿಂದೆ ತೇಜಸ್ವಿ ಹೆಚ್ ಒಡಿ ಸ್ಥಾನದಿಂದ ಬದಲಾಗಿದ್ದರು. ನಡುವೆ ಕೊಠಡಿ ಹೊಸ ಹೆಚ್ ಒಡಿ ಸುಪರ್ದಿಯಲ್ಲಿತ್ತು.

ಇದೀಗ ಸಹೋದ್ಯೋಗಿಗಳು ಹಿಂದಿನ ಹೆಚ್ ಒಡಿ ಫೋಟೋ ಹರಿದು, ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಸಂಬಂಧ ವಾಮಾಚಾರಕ್ಕೆ ಒಳಗಾದ ಅಧ್ಯಾಪಕ ತೇಜಸ್ವಿ ಅವರು ದೂರು ನೀಡಿದ್ದಾರೆ.

ಕಳೆದ ಆರು ತಿಂಗಳ ಹಿಂದೆಯೇ ತೇಜಸ್ವಿ ಅವರು ಕೊಠಡಿ ಕೀ ನೀಡಿದ್ದು, ಇದೀಗ ಕೊಠಡಿಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.