ವ್ಯಕ್ತಿ ಬಂಧನ:2.6 ಲಕ್ಷ ಬೆಲೆಯ ಗಾಂಜಾವಶ

ಮೈಸೂರು: ಸಿ.ಸಿ.ಬಿ. ಪೊಲೀಸರು ಗಾಂಜಾ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿ 2,06,000 ರೂ. ಮೌಲ್ಯದ 5 ಕೆ.ಜಿ. 150 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸೆ 9 ರಂದು ಸಿ.ಸಿ.ಬಿ. ಪೊಲೀಸರು ಮೈಸೂರು ನಗರ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಮಂಡಿ ಮೊಹಲ್ಲಾದ ಸುನ್ನಿ ಚೌಕದಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಕುಳಿತಿದ್ದರು.
ಪೊಲೀಸರನ್ನು ನೋಡಿ ಒಬ್ಬ ಓಡಿ ಹೋಗಿದ್ದಾನೆ. ಮತ್ತೊಬ್ಬನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ  ದ್ವಿಚಕ್ರ ವಾಹನದಲ್ಲಿ ಗಾಂಜಾ ಇಟ್ಟುಕೊಂಡಿರುವುದು  ಗೊತ್ತಾಗಿದೆ.
ಆತನಿಂದ ಸುಮಾರು 2,06,000 ರೂ. ಮೌಲ್ಯದ 5ಕೆ.ಜಿ. 150 ಗ್ರಾಂ ತೂಕದ ಗಾಂಜಾ ಹಾಗೂ ತೂಕದ ಯಂತ್ರ ಮತ್ತು  ದ್ವಿಚಕ್ರವಾಹನವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ
ಡಿಸಿಪಿ ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಎಸಿಪಿ ಸಿ.ಕೆ.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಹೆಚ್ ಬಿ ವಿಭಾಗದ ಇನ್ಸ್ಪೆಕ್ಟರ್  ಜಿ.ಶೇಖರ್, ಸಿಬ್ಬಂದಿಗಳಾದ  ̧ಸಲೀಂಪಾಷ, ಉಮಾಮಹೇಶ, ಮಧುಸೂದನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.