ಮೈಸೂರು: ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಸೇವಾ ಪಾಕ್ಷಿಕ ದ ಅಡಿಯಲ್ಲಿ ಭಾನುವಾರ ಅರಳಿಮರ ಗಿಡ ನೆಡಸುವ ಅಭಿಯಾನಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಭಾ.ಜ.ಪ.ಘಟಕವು ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕ ರಿಗೆ ಹಾಗೂ ಪರಿಸರಕ್ಕೆ ಅನೂಕೊಲ ವಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಹಿಂದುಳಿದ ವರ್ಗಗಳ ಮೊರ್ಚಾದ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಶಾಲಾ ಕಾಲೇಜು ಅವರಣ, ಸರ್ಕಾರಿ ಸ್ಥಳ, ಜಿಲ್ಲಾ ಆಸ್ಪತ್ರೆ, ಸ್ಮಶಾನದಲ್ಲಿ, ಪಾರ್ಕ್ ಗಳು ಇನ್ನೂ ಮುಂತಾದ ಸ್ಥಳಗಳಲ್ಲಿ ಅರಳಿಮರಗಳನ್ನು ಸಾರ್ವಜನಿಕರೊಂದಿಗೆ ನೆಡಸ ಬೇಕಾಗಿರುವುದರಿಂದ ಇಂದು ಸಾಂಕೇತಿಕವಾಗಿ ಸರ್ಕಾರಿ ಅಥಿತಿ ಗೃಹ ದಲ್ಲಿ ಚಾಲನೆ ನೀಡಲಾಯಿತು..
ನಂತರ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಪರಿಸರ ನಮ್ಮೆಲ್ಲರ ಆಸ್ತಿ, ಭಾ.ಜ.ಪ.ಘಟಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಆಡಂಬರ ವಿಲ್ಲದೆ ಸಾರ್ವಜನಿಕರಿಗೆ ಹಾಗೂ ದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ,ಮುಂದೊಂದು ದಿನ ವಾಯುಮಾಲಿನ್ಯದ ಆಗುವ ಅನಾಹುತ ತಡೆಗಟ್ಟಲು ಭಾ.ಜ.ಪ.ಯುವಕರು ಅರಳಿಮರ ನೆಡುವ ಮೂಲಕ ಸಮಾಜಕ್ಕೆ ಮಾದರಿಯಾಗಲಿದ್ದಾರೆ ಎಂದರು.
ಶಾಸಕ ನಾಗೇಂದ್ರ ರವರು ಮಾತನಾಡಿ ಅರಳಿಮರ ಶ್ರೇಷ್ಠ ವಾದ ಮರ ಹಾಗೂ ವೈಜ್ಞಾನಿಕ ವಾಗಿ ಸಾರ್ವಜನಿಕ ರು ಹೆಚ್ಚು ಇರುವ ಸ್ಥಳಗಳಲ್ಲಿ ಅರಳಿಮರದ ಅವಶ್ಯಕತೆ ಇದೆ ಪಾರ್ಕಿಗೊಂದು ಅರಳಿಮರ ಕಡ್ಡಾಯವಾಗಿ ಇರಬೇಕು ಹಾಗೆ ಈಗಾಗಲೇ ಮೈಸೂರಿನ ಹೊರ ವರ್ತುಲ ರಸ್ತೆಯಲ್ಲಿ ಸಾವಿರಾರು ಅರಳಿಮರವನ್ನು ಸಂಘ ಸಂಸ್ಥೆಗಳ ಒಟ್ಟುಗೂಡಿ ನೆಡುವ ಮೂಲಕ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದರು..
ಈ ಭಾ.ಜ.ಪ.ನಗರ ಅಧ್ಯಕ್ಷ ಟಿ.ಎಸ್. ಶ್ರೀ ವತ್ಸ, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು,ಉಪ ಮೇಯರ್ ರೂಪ ಯೋಗೇಶ್ ನಗರಪಾಲಿಕೆ ಸದಸ್ಯ ಸತೀಶ್, ಕೆ.ಜೆ.ರಮೇಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಣಿರತ್ನಂ, ಸೋಮಶೇಖರ್ ರಾಜು,ಹರೀಶ್, ಪುನೀತ್, ರಮೇಶ್,ಚಿಕ್ಕಮ್ಮ ಬಸವರಾಜ್, ಶಿವರಾಜ್, ಕೃಷ್ಣ ಮೂರ್ತಿ,ಜಗದೀಶ್, ವಿಜಯ್,ಸೂರಜ್, ಅಂಕಿತ್ ಮುಂತಾದವರು ಇದ್ದರು.

