ಬೆಂಗಳೂರಿನಲ್ಲಿ ಮುಲಾಜಿಲ್ಲದೆ ಒತ್ತುವರಿ ತೆರವು -ಅಶೋಕ್ ಕಡಕ್ ನುಡಿ

ಮೈಸೂರು: ಬೆಂಗಳೂರು ನಗರದಾದ್ಯಂತ ಯಾವುದೇ ಬೇಧಭಾವ ‌ಇಲ್ಲದೆ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,

ರಾಜಕಾರಣಿಗಳೇ ಇರಲಿ, ಬಡವರಾಗಲೀ ಶ್ರೀಮಂತರೇ ಆಗಲೀ ಒತ್ತುವರಿ ತೆರವು ಮುಲಾಜಿಲ್ಲದೆ ನಡೆಯಲಿದೆ ಎಂದು ಕಡಕ್ಕಾಗಿ ಹೇಳಿದರು.

ಸದ್ಯಕ್ಕೆ ಬೆಂಗಳೂರಿನ ಎರಡು ವಲಯದಲ್ಲಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನ ಎಲ್ಲೆಡೆ ಒತ್ತುವರಿ ತೆರವು ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಬಡವರು ಮಾಡಿರುವ ಒತ್ತುವರಿ ತೆರವು ಮಾಡಲು ಮಾಧ್ಯಮದವರು ಬಿಡುವುದಿಲ್ಲ ಇತ್ತಾ ಶ್ರೀಮಂತರು ಮಾಡಿರುವ ಒತ್ತುವರಿ ತೆರವಿಗೆ ಕಾಂಗ್ರೆಸ್ ನವರು ಬಿಡುತ್ತಿಲ್ಲ ಎಂದು ಅಶೋಕ್ ಅಸಹಾಯಕತೆ ‌ವ್ಯಕ್ತಪಡಿಸಿದರು.

ಆದರೆ ಬಡವರು ಶ್ರೀಮಂತರು ಎನ್ನದೇ ಎಲ್ಲಾ ಒತ್ತುವರಿ ತೆರವು ಮಾಡಲೇಬೇಕಿದೆ.ಇಲ್ಲದಿದ್ದರೆ ಮುಂದೆ ಭಾರೀ ತೊಂದರೆ ಆಗುತ್ತದೆ‌ ಎಂದು ತಿಳಿಸಿದರು.

ಒತ್ತುವರಿ ತೆರವು ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ರಾಜಕಾರಣ ಮಾಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.