ಶಿವಮೊಗ್ಗ: ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದ ಇಬ್ಬರು ಉಗ್ರರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಯಾಸಿನ್, ಮೊಹಮ್ಮದ್ ಶಾರಿಕ್ ಬಂಧಿತ ಉಗ್ರರು.ಮತ್ತೊಬ್ಬ ಮಾಝ್ ಎಂಬ ಶಂಕಿತನನ್ನು ವಶಕ್ಕೆ ಪಡೆಯಲು ಶಿವಮೊಗ್ಗ ಪೊಲೀಸರು ಬಲೆ ಬೀಸಿದ್ದಾರೆ.
ಉಗ್ರರ ಬಂಧನದಿಂದ ಒಂದು ವಿಧ್ವಂಸಕ ಕೃತ್ಯ ತಪ್ಪಿದಂತಾಗಿದೆ.
ಐಸೀಸ್ ಉಗ್ರರೊಂದಿಗೆ ಈ ಮೂವರು ಸಂಪರ್ಕದಲ್ಲಿದ್ದರು ಎಂದು ಗೊತ್ತಾಗಿದೆ.
ಬಾಂಬ್ ಬ್ಲಾಸ್ಟ್ ಸೇರಿದಂತೆ ದುಷ್ಕೃತ್ಯದಲ್ಲಿ ಇವರು ಎತ್ತಿದ ಕೈ.ಬಂಧಿತರಿಬ್ಬರೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರು ಎಂದು ಗೊತ್ತಾಗಿದೆ.
ಉಗ್ರರ ಬಂಧನ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಪ್ರತಿಕ್ರಿಯಿಸಿ,ಶಿವಮೊಗ್ಗದಲ್ಲಿ ಉಗ್ರರನ್ನು ಬಂಧಿಸಿರುವುದು ನಿಜಕ್ಕೂ ಆತಂಕಕಾರಿ ವಿಷಯ ಎಂದು ತಿಳಿಸಿದರು.
ಒಟ್ಟು ಮೂವರು ಶಂಕಿತರನ್ನು ಶಿವಮೊಗ್ಗ ಪೊಲೀಸರು ಪತ್ತೆಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ ಮತ್ತೊಬ್ಬನನ್ನು ಬಂಧಿಸಲು ಬಲೆಬೀಸಿದ್ದಾರೆ, ಶಿವಮೊಗ್ಗ ಪೊಲೀಸರನ್ನು ನಾನು ಅಭಿನಂಧಿಸುತ್ತೇನೆ ಎಂದು ಹೇಳಿದರು.
ಉಗ್ರರ ಬಂಧನ ಹಾಗೂ ವಿಚಾರಣೆ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಐಸೀಸ್ ಜತೆಗೆ ಅವರು ಸಂಪರ್ಕದಲ್ಲಿರುವುದು ಗೊತ್ತಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

