ಶಿಶುವಿಹಾರದಲ್ಲಿ ಶೂಟೌಟ್: ಮಕ್ಕಳು ಸೇರಿ 36 ಮಂದಿ ಸಾವು

ಥೈಲೆಂಡ್: ಈಶಾನ್ಯ ಥೈಲೆಂಡ್‌ ಪ್ರದೇಶದ ಶಿಶುವಿಹಾರದಲ್ಲಿ ದುಷ್ಕರ್ಮಿಯೊಬ್ಬ ಮನಬಂತೆ ಶೂಟೌಟ್ ಮಾಡಿದ್ದು, ಮಕ್ಕಳು ಸೇರಿದಂತೆ 36ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಶೂಟೌಟ್ ನಂತರ ದುಷ್ಕರ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈಶಾನ್ಯ ಭಾಗದ ನಾಂಗ್ಬವಾ ಪ್ಯಾಂಪುದಲ್ಲಿರುವ ಮಕ್ಕಳ ಆರೈಕೆ ಕೇಂದ್ರಕ್ಕೆ ಮಧ್ಯಾಹ್ನದ ವೇಳೆಗೆ ನುಗ್ಗಿದ ದುಷ್ಕರ್ಮಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ಜೊತೆಗೆ ಚಾಕುವಿನಿಂದಲೂ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ 24 ಮಕ್ಕಳು ಸೇರಿದಂತೆ 36ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ.

ಆರೋಪಿ ಬ್ಯಾಂಕಾಕ್ ನೊಂದಣಿಯ ಟಯೋಟಾ ಪೀಕಬ್ ಟ್ರಕ್ನಲ್ಲಿ ಬಂದಿದ್ದಾನೆ.

ಪ್ರಧಾನಿ ಪ್ರಯುತ್ ಸನ್ ಓಂಚಾ ಅವರು ಘಟನೆ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ಮಾನವ ಹತ್ಯಾಕಾಂಡ ನಡೆಸಿದ ದುಷ್ಕರ್ಮಿಯನ್ನು ಹತ್ಯೆ ಮಾಡುವಂತೆ ಆದೇಶಿಸಿದ್ದಾರೆ.

ಆದರೆ ಆರೋಪಿ ಖುದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಂದ್ರ ತನಿಖಾ ಸಂಸ್ಥೆ ಸ್ಪಷ್ಟಪಡಿಸಿದೆ.

ದುಷ್ಕರ್ಮಿ ಮಾಜಿ ಪೊಲೀಸ್ ಅಧಿಕಾರಿ ಎಂದು ತಿಳಿದುಬಂದಿದೆ.