ಮೈಸೂರು: ಬುಧವಾರ ತಡರಾತ್ರಿ ಮೈಸೂರಿನ ದೇವರಾಜ ಮಾರುಕಟ್ಟೆ ಬಳಿ ಹಳೇ ಕಳ್ಳನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಕುಂಬಾರ ಕೊಪ್ಪಲಿನ ನಿವಾಸಿ ಸುನಿಲ್.ಆ.ದತ್ತು (25) ಕೊಲೆಯಾದ ಹಳೇ ಕಳ್ಳ.
ಬೋಟಿ ಬಜಾರ್ ನಲ್ಲಿ ಹೋಟೆಲ್ ಒಂದರ ಬಳಿ ಹಂತಕರು ಕಳ್ಳನನ್ನು ಕೊಂದು ಪರಾರಿಯಾಗಿದ್ದಾರೆ.
ಘಟನೆ ನಡೆದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಕೊಲೆಗೆ ಹಳೇ ದ್ವೇಷ ವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆಯಾದ ಕಳ್ಳ ಹಲವಾರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ.
ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

