ಮೈಸೂರು: ಮುರುಘಾ ಮಠದ ಮುರುಘಾ ಶ್ರೀಗಳ ಎರಡನೆ ಪೋಕ್ಸೋ ಪ್ರಕರಣ ಸಂಬಂಧ ಚಿತ್ರದುರ್ಗದಿಂದ ಕೆಲ ಅಧಿಕಾರಿಗಳು ಮೈಸೂರಿನ ಒಡನಾಡಿ ಸಂಸ್ಥೆಗೆ ಆಗಮಿಸಿದ್ದಾರೆ.
ಸಿಪಿಐ ಬಾಲಚಂದ್ರ ನಾಯ್ಡು ನೇತೃತ್ವದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು,ಮಹಿಳಾ ಪೊಲೀಸರು ಬಾಲಕಿಯರ 161 ಹೇಳಿಕೆ ಪಡೆಯಲು ಬಂದಿದ್ದಾರೆ.
ಈ ಸಂಬಂಧ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ನಮ್ಮ ಸಂಸ್ಥೆಗೆ ಬಂದಿದ್ದಾರೆ ಅವರೊಂದಿಗೆ ಅಧಿಕಾರಿಗಳೂ ಆಗಮಿಸಿದ್ದಾರೆ.ಅವರಿಗೆ ಎಲ್ಲಾ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಚಿತ್ರದುರ್ಗದ ಮುರುಘಾಮಠದ ವಸತಿನಿಲಯದಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೂ ಮುರುಘಾ ಶರಣರು ಲೈಂಗಿಕ ಕಿರುಕುಳ ನಿಡಿದ್ದಾರೆಂದು ದೂರು ನೀಡಿದ್ದರು.
ಆಕೆಯ ಹೆಣ್ಣುಮಕ್ಕಳು ಒಡನಾಡಿಸಂಸ್ಥೆಯಲ್ಲಿ ಉಳಿದುಕೊಂಡಿದ್ದು ಸೋಮವಾರ ಆಮಕ್ಕಳಿಂದ 161 ಹೇಳಿಕೆ ಪಡೆಯಲು ಪೊಲೀಸರು ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ.

