ಮೈಸೂರು ಅರಮನೆಯ ಕೋಟೆ ಗೋಡೆ ಕುಸಿತ: ಸಾರ್ವಜನಿಕರ ಆಕ್ರೋಶ

ಮೈಸೂರು: ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಐತಿಹಾಸಿಕ ಮೈಸೂರು ಅರಮನೆಯ ಸುತ್ತ ನಿರ್ಮಿಸಲಾಗಿದ್ದ  ಕೋಟೆಯ ಗೋಡೆ ಕುಸಿದಿದೆ.

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಇರುವ ಕೋಟೆಯ ಗೋಡೆ ಕುಸಿದಿದ್ದು ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಅರಮನೆಯ ರಕ್ಷಣೆಗಾಗಿ ಈ ಕೋಟೆಯ ಗೋಡೆಯನ್ನು ನಿರ್ಮಿಸಲಾಗಿದೆ. ಆದರೆ ದಸರಾಹಬ್ಬ ಮುಗಿದು ಎರಡು  ವಾರವೂ ಕಳೆದಿಲ್ಲ.

ದಸರಾ ಸಂದರ್ಭದಲ್ಲಿ ಅರಮನೆಗೆ ಶೃಂಗಾರ ಮಾಡಲಾಗಿತ್ತು ಆದರೆ ಅಷ್ಟು ದೊಡ್ಡ ರಕ್ಷಣಾ ಗೋಡೆ ಅಧಿಕಾರಿಗಳು ಜನಪ್ರತಿನಿಧಿಗಳ ಕಣ್ಣಿಗೆ‌ ಬೀಳಲಿಲ್ಲವೆ ಎಂದು ಜನ ಕಿಡಿಕಾರಿದ್ದಾರೆ.

ಕೋಟೆ ಮಾರಮ್ಮ ದೇಗುಲ ಜಯಮಾರ್ತಾಂಡ ದ್ವಾರದ ನಡುವೆ ಕೋಟೆಯ ಗೋಡೆ ಕುಸಿದುಬಿದ್ದಿದೆ.

ಅರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು.

ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ಅರಮನೆಯ ಸುತ್ತಲೂ ಎತ್ತರದ ಕೋಟೆ ಗೋಡೆಯನಯ ನಿರ್ಮಿಸಲಾಗಿದೆ.

ಆದರೆ‌ ಗೋಡೆ ಶಿಥಿಲವಾಗಿದ್ದರೂ ಸರ್ಕಾರ ಹಾಗೂ ಪುರಾತತ್ವ ಇಲಾಖೆ ಗಮನಿಸದಿರುವುದಕ್ಕೆ ಮೈಸೂರಿನ ಜನತೆ ಹಾಗೂ ಪ್ರವಾಸಿಗರು ಕಿಡಿಕಾರಿದ್ದಾರೆ.

ಸಧ್ಯಕ್ಕೆ‌ ಕುಸಿತವಾಗಿರುವ‌ ಕೋಟೆಯ ಜಾಗದಲ್ಲಿ ಟಾರ್ಪಾಲ್ ಹೊದಿಸಿ ರಕ್ಷಣಾ ಕಾರ್ಯ ನಡೆಸಲಾಗಿದೆ.

ಇನ್ನು ಮುಂದಾದರೂ ಐತಿಹಾಸಿಕ ತಾಣಗಳನ್ನು ‌ಸಂರಕ್ಷಿಸಬೇಕೆಂದು ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.