ಇರಾನ್: ಕೈದಿಗಳು ಒಬ್ಬರಿಗೊಬ್ಬರು ಕಿತ್ತಾಡಿ ಜೈಲಿಗೆ ಬೆಂಕಿ ಹಾಕಿದ ಪರಿಣಾಮ 8 ಮಂದಿ ಸಜೀವವಾಗಿ ದಹನವಾಗಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಟೆಹರಾನ್ನ ಏವಿಯನ್ ಜೈಲಿನಲ್ಲಿ ನಡೆದಿದೆ.
ಇಡೀ ಜೈಲು ಬೆಂಕಿಗೆ ಆಹುತಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ನಲ್ಲಿ ಹಿಜಾಬ್ ಸಂಘರ್ಷ ತಲೆದೋರಿರುವ ಬೆನ್ನಲ್ಲೇ ಜೈಲಿನಲ್ಲಿ ಕೈದಿಗಳ ಕಿತ್ತಾಟ ಘಟನೆ ನಡೆದಿರುವುದು ಜನರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ.
ದರೋಡೆ, ಹೀನ ಅಪರಾಧ ಪ್ರಕರಣಗಳಲ್ಲಿ ಬಂಧಿತರಾದ ಹಲವಾರು ಕೈದಿಗಳು ಈ ಜೈಲಿನಲ್ಲಿದ್ದು, ಪರಸ್ಪರ ಕಿತ್ತಾಡಿದ್ದಾರೆ.
ಈ ವೇಳೆ ಕೈದಿಗಳೇ ಜೈಲಿಗೆ ಬೆಂಕಿ ಹಾಕಲಾಗಿದೆ. ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡು ಇಡೀ ಜೈಲನ್ನು ಆವರಿಸಿಕೊಂಡಿದೆ.
ದಟ್ಟ ಹೊಗೆ ಆವರಿಸಿ ಉಸಿರಾಡಲು ಅಪರಾಧಿಗಳು ತೊಂದರೆಪಟ್ಟಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಕಿತ್ತಾಡಿದ ಸಂದರ್ಭದಲ್ಲಿ ಗುಂಡಿನ ಸದ್ದು ಕೂಡ ಜೈಲಿನಲ್ಲಿ ಕೇಳಿಬಂದಿದೆ. ಇದು ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿರಬಹುದೆಂದು ಜೈಲಿನ ಸಿಬ್ಬಂದಿ ಹೇಳಿದ್ದಾರೆ.

