ಕಾಂತಾರ ಚಿತ್ರದ ಕಾಮೆಂಟ್ :ನಟ ಚೇತನ್ ಗೆ ನೆಟ್ಟಿಗರ ತರಾಟೆ

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಭರ್ಜರಿ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿಲ್ಲ ಎಂದು ನಟ ಚೇತನ್ ಟ್ವೀಟ್ ಮಾಡಿರುವುದು ಭಾರೀ ವಿವಾದ ಹುಟ್ಟು ಹಾಕಿದೆ.

ರಿಷಬ್ ಶಟ್ಟಿ ಅವರು ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರಕ್ಕೆ ನಟ ಚೇತನ್  ಮಾಡಿರುವ ಟ್ವೀಟ್ ಮಾಡಿರುವುದು ಬಹಳಷ್ಟು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ನಮ್ಮ ಕನ್ನಡದ ಚಲನಚಿತ್ರ ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ ಎಂದು ಟ್ವೀಟ್ ನಲ್ಲಿ ಚೇತನ್ ಹೇಳಿದ್ದರೂ ಭೂತಕೋಲದ ಬಗ್ಗೆ ಕಾಮೆಂಟ್ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.ಇದು ನಿಜವಲ್ಲ.

ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು.

ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್ಬುಕ್ ಪುಟದಲ್ಲಿ ಚೇತನ್ ಬರೆದುಕೊಂಡಿದ್ದಾರೆ.

ಚೇತನ್ ಅವರ ಟ್ವೀಟ್ಗೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಚಿತ್ರಕ್ಕೆ ಜಾತಿ, ಧರ್ಮ ಲೇಪ ಮಾಡುವುದು ಚೇತನ್ನಂತವರಿಗೆ ಮಾತ್ರ ಬರುತ್ತದೆ ಎಂದು ಕೆಲವರು ತಿರುಗೇಟು ನೀಡಿದ್ದಾರೆ.

ಕಾಂತಾರ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಸಿನಿಮಾವನ್ನು ಸ್ಟಾರ್ ಕಲಾವಿದರು ಕೂಡ ನೋಡಿ ಮೆಚ್ಚಿದ್ದಾರೆ,ಇನ್ನೂ ಬಹಳಷ್ಟು ಮಂದಿ ನೋಡಲು ಕಾಯುತ್ತಿದ್ದಾರೆ.

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಕೂಡ ಕಾಂತಾರ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.

ಹೀಗಿರುವಾಗ ಚೇತನ್ ಮನಬಂದಂತೆ ಕಾಂತಾರ ಬಗ್ಗೆ ಕಾಮೆಂಟ್ ಮಾಡಬಾರದಿತ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.