ಮೈಸೂರು: ಮೈಸೂರಿನ ಕೇಂದ್ರ ಇಂಟಲಿಜೆನ್ಸ್ ಬ್ಯೂರೊದ ನಿವೃತ್ತ ಅಧಿಕಾರಿಯನ್ನು ಅಪಘಾತದ ರೀತಿಯಲ್ಲಿ ಕೊಲೆ ಮಾಡಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
83 ವರ್ಷದ ಆರ್.ಎಸ್.ಕುಲಕರ್ಣಿ ಕೊಲೆಯಾದ ಇಂಟಲಿಜೆನ್ಸ್ ಬ್ಯೂರೊದ ನಿವೃತ್ತ ಅಧಿಕಾರಿ.
ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ಆರ್.ಎಸ್.ಕುಲಕರ್ಣಿ ಅವರು ವಾಕಿಂಗ್ ಮಾಡುತ್ತಿದ್ದಾಗ ಆಕ್ಸಿಡೆಂಟ್ ಮಾಡಲಾಗಿದೆ.
ತೀವ್ರ ಗಾಯಗೊಂಡ ಕುಲಕರ್ಣಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೇಲ್ನೋಟಕ್ಕೆ ಇದು ಅಪಘಾತ ಎಂದು ಕಂಡು ಬಂದರೂ ಕೊಲೆ ಶಂಕೆ ವ್ಯಕ್ತವಾಗಿದೆ.
ಅಪಘಾತವಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮೇಲ್ನೋಟಕ್ಕೆ ಇದೊಂದು ಹಿಟ್ ಅಂಡ್ ರನ್ ಪ್ರಕರಣವೆಂದು ಕಂಡುಬಂದರೂ ಕೊಲೆ ಎಂದೇ ಹೇಳಲಾಗುತ್ತಿದೆ.
ಪೊಲೀಸರು ಕೂಡಾ ಹಿಟ್ ಅಂಡ್ ರನ್ ಅಂದುಕೊಂಡಿದ್ದರು.ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭಯಾನಕ ಸತ್ಯ ಬಯಲಾಗಿದೆ.
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು ದುಶ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.
ರಸ್ತೆ ಬದಿಯಲ್ಲಿ ಹೋಗುತ್ತಿದ್ದರೂ ದುಶ್ಕರ್ಮಿಗಳು ಅಪಘಾತವೆಸಗಿ ಪರಾರಿಯಾಗಿದ್ದಾರೆ.
ಅಪಘಾತವಾದ ಸ್ಥಳದಲ್ಲಿ ಕೃತ್ಯವೆಸಗಿದ ಕಾರಿನ ಮಿರರ್ ಪತ್ತೆಯಾಗಿದೆ.
ಪ್ರಕಣರದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದೇವೆ. ಎಸಿಪಿ ನೇತೃತ್ವದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
ಶೀಘ್ರವೇ ಪ್ರಕರಣ ಬೇಧಿಸಲಿದ್ದೇವೆ, ಕುಲಕರ್ಣಿಯವರು ನಿವೃತ್ತರಾಗಿ 23 ವರ್ಷಗಳಾಗಿವೆ. ಕೊಲೆಗೆ ವೃತ್ತಿ ವೈಷಮ್ಯವೆ ಅಥವಾ ವೈಯುಕ್ತಿಕ ವೈಷಮ್ಯ ಕಾರಣವೇ ಎಂದು ಈಗಲೇ ಏನೂ ಹೇಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಜಯಲಕ್ಷ್ಮಿಪುರಂ ಪೋಲಿಸ್ ಸ್ಟೇಷನ್ ನಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಾರಂಭವಾಗಿದೆ.

