ಸಿಒಡಿಯಿಂದ ಅಂತಿಮ ವರದಿ ಬರುವತನಕ ಪಿಎಸ್ ಐ ಪರೀಕ್ಷೆ ಇಲ್ಲ -ಆರಗ

ಮೈಸೂರು : ಸಿಒಡಿಯವರು  ಅಂತಿಮ ವರದಿ ಕೊಡುವ ತನಕ ಪಿಎಸ್ ಪರೀಕ್ಷೆ ನಡೆಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮೈಸೂರು ನಗರ ಪೊಲೀಸ್ ಘಟಕದಲ್ಲಿ ನೂತನವಾಗಿ ನಿರ್ಮಿಸಿರುವ ಆಲನಹಳ್ಳಿ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಪಿಎಸ್ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ೧೦೬ ಜನರು ಕಸ್ಟಡಿಯಲ್ಲಿ ಇದ್ದಾರೆ, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ಮಾಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

.೧೫ ಕೋಟಿ ರೂ ವೆಚ್ಚದಲ್ಲಿ  ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.ಒಟ್ಟಾರೆ ೧೧೭ಕೋಟಿ ವೆಚ್ಚದಲ್ಲಿ ಹೊಸ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಶೇ.೩೫ ರಷ್ಟು ಖಾಲಿ ಹುದ್ದೆಗಳು ಇತ್ತು,ಅದರಲ್ಲಿ ಬಹಳಷ್ಟು ಬರ್ತಿಯಾಗಿದ್ದು ಈಗ ಹನ್ನೆರಡು ಸಾವಿರ ಹುದ್ದೆ ಖಾಲಿ ಇದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಏನೇ ತೊಂದರೆಯಾಗಿದ್ದರೂ ೧೧೨ ಸಂಖ್ಯೆಗೆ  ಕರೆ ಮಾಡಿದರೆ ಒಂಬತ್ತು ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳಿದರು.

ಇಲಾಖೆಯಲ್ಲಿ ಸಿಬ್ಬಂದಿ ವರ್ಗಾವಣೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಎಸ್..ರಾಮದಾಸ್,ಪಾಲಿಕೆ ಸದಸ್ಯರಾದ ರಜನಿ ಅಣ್ಣಯ್ಯ,ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಎಂ.ಎಸ್.ಗೀತಾ ಪ್ರಸನ್ನ,ಶಿವರಾಜು,ಎಸಿಪಿಗಳಾದ ಗಂಗಾಧರ ಸ್ವಾಮಿ, ಕೆ.ಅಶ್ವಥ ನಾರಾಯಣ, ಎಚ್.ಪರಶುರಾಮ ಮತ್ತಿತರರು ಹಾಜರಿದ್ದರು.