ನವದೆಹಲಿ: ಬಹು ಕುತೂಹಲ ಕೆರಳಿಸಿದ್ದ ಗುಜರಾತ್ ಮತ್ತು ಹಿಮಾಚಲಪ್ರದೇಶದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಗುಜರಾತ್ ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಆಪ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಧೂಳೀಪಟ ಮಾಡಿದೆ.
ಗುಜರಾತ್‍ನ ಇತಿಹಾಸದಲ್ಲೇ ಶೇ. 54ಕ್ಕಿಂತಲೂ ಹೆಚ್ಚಿನ ಮತ ಪಡೆದ ಬಿಜೆಪಿ 157 ಸ್ಥಾನಗಳಲ್ಲಿ ಗೆದ್ದಿದ್ದು, ಕಾಂಗ್ರೆಸ್ ಅನ್ನು ಪ್ರತಿಪಕ್ಷ ಸ್ಥಾನಕ್ಕೂ ಅರ್ಹತೆ ಇಲ್ಲದಂತೆ ಮಾಡಿದೆ.
ಗುಜರಾತ್ ನಲ್ಲಿ ಬಿಜೆಪಿ ಸತತ 7ನೇ ಬಾರಿ ಅಧಿಕಾರ ಗದ್ದುಗೆ ಹಿಡಿದಿರುವುದು ವಿಶೇಷ.
ಇನ್ನು ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಕೊನೆಯ ಕ್ಷಣದವರೆಗೂ ಕುತೂಹಲ ಕೆರಳಿಸಿತ್ತು
ಗುಜರಾತ್‍ನಲ್ಲಿ 182 ಸ್ಥಾನಗಳಿಗೆ ಡಿ.1 ಮತ್ತು 5ರಂದು ಚುನಾವಣೆ ನಡೆದಿತ್ತು.
ಅಧಿಕಾರದ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ 92 ಸ್ಥಾನಗಳನ್ನು ಪಡೆಯಬೇಕಿತ್ತು.
ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆ ಬಹುತೇಕ ನಿಜವಾಗಿದ್ದು 157 ಕ್ಷೇತ್ರಗಳಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾದಿಸಿದೆ.
ಬಹಳ ಸದ್ದು ಮಾಡುತ್ತಿದ್ದ ಅಮ್ ಆದ್ಮಿಪಕ್ಷ ಮೂರನೇ ಸ್ಥಾನದಲ್ಲಿದ್ದರೆ ಕಾಂಗ್ರೆಸ್ ಸೊರಗಿ ಸುಣ್ಣವಾಗಿ ಹೀನಾಯ ಸ್ಥಿತಿ ತಲುಪಿ 2ನೇ ಸ್ಥಾನದಲ್ಲಿದೆ.
ಘಟಾನುಘಟಿ ಬಿಜೆಪಿ ನಾಯಕರು ಪುನಾರಾಯ್ಕೆಯಾಗಿದ್ದು, ಫಲಿತಾಂಶದಲ್ಲಿ ಬಿಜೆಪಿ ಶೇ.52.8ರಷ್ಟು ಮತ ಗಳಿಕೆ ಮಾಡಿದರೆ, ಕಾಂಗ್ರೆಸ್ 26.8ರಷ್ಟು, ಅಮ್ ಆದ್ಮಿ ಪಕ್ಷ ಶೇ.14ರಷ್ಟು ಮತ ಗಳಿಕೆ ಮಾಡಿದೆ.
ಹಿಮಾಚಲಪ್ರದೇಶ:ಹಿಮಾಚಲಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.
68 ಕ್ಷೇತ್ರಗಳ ಹಿಮಾಚಲಪ್ರದೇಶದಲ್ಲಿ ಈ ಹಿಂದೆ ಬಿಜೆಪಿಯ ಜಯರಾಮ್ ಠಾಕೂರ್ ಮುಖ್ಯಮಂತ್ರಿಯಾಗಿದ್ದರು.
ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ. ಬಿಜೆಪಿ 26 ಸ್ಥಾನಗಳಲ್ಲಿ , ಕಾಂಗ್ರೆಸ್ 39 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಆಪ್ ಹೀನಾಯ ಸೋಲನುಭವಿಸಿ ಸೊನ್ನೆ ಫಲಿತಾಂಶ ದಾಖಲಿಸಿದೆ.

